3ನೇ ಏಕದಿನ : ಜಡೇಜಾ ಬದಲಿಗೆ ಧೋನಿ ಸ್ಟುವರ್ಟ್ ಬಿನ್ನಿಯನ್ನು ಆಡಿಸುತ್ತಾರಾ?

ಮಂಗಳವಾರ, 23 ಜೂನ್ 2015 (19:44 IST)
ಭಾರತದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ 2014ರಲ್ಲಿ ಸುರೇಶ್ ರೈನಾ ನಾಯಕತ್ವದಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ ಎರಡನೇ ಏಕದಿನದಲ್ಲಿ  ಅದ್ಭುತ ಬೌಲಿಂಗ್ ಮೂಲಕ ಬಾಂಗ್ಲಾ ತಂಡಕ್ಕೆ ಹಾನಿ ಮಾಡಿದರು. ವೇಗಿಗಳಿಗೆ ನೆರವಾಗುವ ಟ್ರಾಕ್‌ನಲ್ಲಿ ಬಿನ್ನಿ ಕೇವಲ ನಾಲ್ಕು ರನ್ ನೀಡಿ 6 ವಿಕೆಟ್ ಕಬಳಿಸಿದರು. ಬಿನ್ನಿಯವರ ಮನೋಜ್ಞ ಬೌಲಿಂಗ್‌ನಿಂದಾಗಿ ಭಾರತಕ್ಕೆ ಗೆಲುವು ತಂದುಕೊಟ್ಟಿತು.

ಏಕೆಂದರೆ ಟೀಂ ಇಂಡಿಯಾ ಕೇವಲ 105 ರನ್ನಿಗೆ ಆಲೌಟ್ ಆಗಿದ್ದಾಗ ಬಿನ್ನಿಯ ವಿನಾಶಕಾರಿ ಬೌಲಿಂಗ್‌ನಿಂದ ಇನ್ನೂ ಕಡಿಮೆ ಸ್ಕೋರಿಗೆ ಬಾಂಗ್ಲಾ ಔಟಾಯಿತು. ಈಗ ಭಾರತ ಎರಡು ಏಕದಿನಗಳಲ್ಲಿ ಸೋತು ಸರಣಿ ಕಳೆದುಕೊಂಡಿದ್ದು, ಧೋನಿ ಅವರು ಅಂತಿಮ ಪಂದ್ಯದಲ್ಲಿ ರವೀಂದ್ರ ಜಡೇಜಾ ಅಥವಾ ಅಕ್ಸರ್ ಪಟೇಲ್ ಬದಲಿಗೆ ಬಿನ್ನಿಯನ್ನು ಆಡಿಸುವ ಸಾಧ್ಯತೆಯಿದೆ.
 
ರವಿಚಂದ್ರನ್ ಅಶ್ವಿನ್ ಉತ್ತಮ ಬೌಲಿಂಗ್ ಮಾಡುತ್ತಿದ್ದು, ಇಬ್ಬರು ಎಡಗೈ ವೇಗಿಗಳು ಯಾವುದೇ ಪರಿಣಾಮ ಬೀರಲು ವಿಫಲರಾಗಿದ್ದಾರೆ. ಜಡೇಜಾ ಕಳೆದ ಒಂದು ವರ್ಷದಿಂದ  ತಮ್ಮ ಸಾಮರ್ಥ್ಯ ತೋರಲು ವಿಫಲರಾಗಿದ್ದು, ಅನನುಭವಿ ಪಟೇಲ್ ಕೂಡ ತಮಗೆ ಸಿಕ್ಕ ಕೆಲವು ಅವಕಾಶಗಳನ್ನು ಸರಿಯಾಗಿ ಸದುಪಯೋಗ ಮಾಡಿಲ್ಲ. ಬಿನ್ನಿ ಬ್ಯಾಟಿಂಗ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಬಲ್ಲವರಾದ್ದರಿಂದ, ಕರ್ನಾಟಕ ಆಲ್ ರೌಂಡರ್‌ರನ್ನು ಬುಧವಾರ ಪಂದ್ಯಕ್ಕೆ  ಧೋನಿ ಆಡಿಸಬಹುದೆಂದು ಭಾವಿಸಲಾಗಿದೆ. 

ವೆಬ್ದುನಿಯಾವನ್ನು ಓದಿ