ಶ್ರೀಲಂಕಾ, ಭಾರತ ಮೂರನೇ ಟೆಸ್ಟ್ : ಮಳೆಯಿಂದ ದಿನದಾಟ ವಾಷ್‌ಔಟ್

ಶುಕ್ರವಾರ, 28 ಆಗಸ್ಟ್ 2015 (17:32 IST)
ಆರಂಭದ ದಿನದ ಬಹುಭಾಗವು ಮಳೆಯಿಂದ ವಾಷ್ ಔಟ್ ಆಗಿದ್ದರಿಂದ ಶ್ರೀಲಂಕಾ ವಿರುದ್ಧ ಮೂರನೇ ಟೆಸ್ಟ್ ಗೆಲ್ಲಬೇಕೆಂದು ಸಂಕಲ್ಪಿಸಿದ್ದ ಭಾರತಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿದೆ. ಸಾಧ್ಯವಾದ 75 ನಿಮಿಷಗಳ ಆಟದಲ್ಲಿ ಬರೀ 15 ಓವರುಗಳ ಆಟ ಸಾಧ್ಯವಾಗಿದ್ದು, ಶ್ರೀಲಂಕಾ ಆರಂಭದ ಎರಡು ವಿಕೆಟ್ ಕಬಳಿಸಿತು. ಟಾಸ್ ಗೆದ್ದ ಶ್ರೀಲಂಕಾ ಮೋಡ ಕವಿದ ವಾತಾರವಣದಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. 
 
ನಾಲ್ಕನೇ ಓವರಿನಲ್ಲಿ 14ಕ್ಕೆ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಭಾರತ ಕೊಹ್ಲಿ ಮತ್ತು ಪೂಜಾರಾ ಅವರ ಎಚ್ಚರಿಕೆಯ ಆಟದಿಂದ 50 ರನ್ ಗಳಿಸಲು ಸಾಧ್ಯವಾಯಿತು. ಆದರೆ ಭಾರೀ ಮಳೆ ಬಿದ್ದಿದ್ದರಿಂದಾಗಿ ಆಟ ಮುಂದುವರಿಸುವುದು ಕಷ್ಟವಾಯಿತು. 
 
ವಿಕೆಟ್ ಕೀಪರ್ ಕುಸಾಲ್ ಪೆರೇರಾ ಕೊಹ್ಲಿ ನೀಡಿದ ಕ್ಯಾಚ್ ಡ್ರಾಪ್ ಮಾಡದೇ ಹಿಡಿದಿದ್ದರೆ ಭಾರತ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಿತ್ತು.  ಕ್ಯಾಚ್ ಮಿಸ್ ಆದ ಬಳಿಕ ಚೆಂಡು ಕೀಪರ್ ಹಿಂಭಾಗದಲ್ಲಿರಿಸಿದ್ದ ಹೆಲ್ಮೆಟ್‌ಗೆ ಬಡಿದಿದ್ದರಿಂದ ಐದು ಪೆನಾಲ್ಟಿ ರನ್ನುಗಳನ್ನು ಭಾರತಕ್ಕೆ ನೀಡಲಾಯಿತು. 
 

ವೆಬ್ದುನಿಯಾವನ್ನು ಓದಿ