3ನೇ ಟೆಸ್ಟ್ : ಭಾರತ 7ಕ್ಕೆ 180 ರನ್, 290 ರನ್ ಲೀಡ್

ಸೋಮವಾರ, 31 ಆಗಸ್ಟ್ 2015 (13:52 IST)
ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ  2ನೇ ಇನ್ನಿಂಗ್ಸ್‌ನಲ್ಲಿ ಭಾರತ 7ವಿಕೆಟ್ ಕಳೆದುಕೊಂಡು 179 ರನ್ ಗಳಿಸಿದೆ. ರೋಹಿತ್ ಶರ್ಮಾ ಮತ್ತು ಸ್ಟುವರ್ಟ್ ಬಿನ್ನಿ ಅವರು ಕ್ರಮವಾಗಿ 50 ರನ್ ಮತ್ತು 49 ರನ್ ಬಾರಿಸಿದ್ದರಿಂದ ಈ ಮೊತ್ತವನ್ನು ಮುಟ್ಟಲು ಸಾಧ್ಯವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 7 ರನ್‌ಗಳಿಗೆ ಮೇಲಿನ ಕ್ರಮಾಂಕದ ಮೂವರು ಆಟಗಾರರನ್ನು ಕಳೆದುಕೊಂಡು ಆಘಾತ ಅನುಭವಿಸಿತು.

ವಿರಾಟ್ ಕೊಹ್ಲಿ ಭಾರತದ ಸ್ಕೋರು 21 ರನ್‌ಗಳಾಗಿದ್ದಾಗ ಔಟಾಗಿದ್ದರಿಂದ ಭಾರತದ ಸ್ಕೋರ್ 64 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ  ರೋಹಿತ್ ಶರ್ಮಾ ಮತ್ತು ಸ್ಟುವರ್ಟ್ ಬಿನ್ನಿ ಅಬ್ಬರದ ಆಟವಾಡಿದ್ದರಿಂದ ಸ್ಕೋರ್ ವೇಗ ಹೆಚ್ಚಿತು. ರೋಹಿತ್ ಶರ್ಮಾ ದಾಮ್ಮಿಕಾ ಪ್ರಸಾದ್ ಎಸೆತದಲ್ಲಿ ಎನ್. ಪ್ರದೀಪ್‌ಗೆ ಕ್ಯಾಚಿತ್ತು ಔಟಾದರು.

ಅವರ ಸ್ಕೋರಿನಲ್ಲಿ 4 ಬೌಂಡರಿ, ಒಂದು ಸಿಕ್ಸರ್ ಇತ್ತು. ಸ್ಟುವರ್ಟ್ ಬಿನ್ನಿ 49 ರನ್ನಿನಲ್ಲಿ 7 ಬೌಂಡರಿಗಳಿದ್ದವು.  ನಮನ್ ಓಜಾ ಹೆರಾತ್ ಬೌಲಿಂಗ್‌ನಲ್ಲಿ ಕರುಣಾರತ್ನೆಗೆ ಕ್ಯಾಚಿತ್ತು ಔಟಾದರು. ಭಾರತ ಮೊದಲ ಇನ್ನಿಂಗ್ಸ್ ಲೀಡ್ ಸೇರಿಸಿಕೊಂಡು ಒಟ್ಟು 290 ರನ್ ಲೀಡ್ ಪಡೆದಿದ್ದಾರೆ. 

ವೆಬ್ದುನಿಯಾವನ್ನು ಓದಿ