ಮೊಯಿನ್ ಅಲಿ ಆಲ್‌ರೌಂಡ್ ಪ್ರದರ್ಶನ, ಪಾಕಿಸ್ತಾನಕ್ಕೆ ಇಂಗ್ಲೆಂಡ್ ವಿರುದ್ದ 141 ರನ್‌ನಿಂದ ಸೋಲು
ಸೋಮವಾರ, 8 ಆಗಸ್ಟ್ 2016 (10:51 IST)
ಮೊಯಿನ್ ಅಲಿ ಅವರ ಶತಕ ಮತ್ತು 2 ವಿಕೆಟ್‌ಗಳ ಆಲ್‌ರೌಂಡ್ ಪ್ರದರ್ಶನದಿಂದ ಇಂಗ್ಲೆಂಡ್ ಎಡ್ಗ್‌ಬಾಸ್ಟನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡವನ್ನು 141 ರನ್‌ಗಳಿಂದ ಸೋಲಿಸಿ ನಾಲ್ಕು ಟೆಸ್ಟ್ ಸರಣಿಯಲ್ಲಿ 2-1ರ ಲೀಡ್ ಗಳಿಸಿದೆ. ಮೊದಲ ಬ್ಯಾಟಿಂಗ್‌ನಲ್ಲಿ 100 ರನ್ ಲೀಡ್ ಬಿಟ್ಟುಕೊಟ್ಟರೂ 114 ವರ್ಷಗಳಲ್ಲಿ ಗೆಲುವು ಗಳಿಸಿದ ಮೊದಲ ತಂಡವೆನಿಸಿತು.
ಇಂಗ್ಲೆಂಡ್ 445ಕ್ಕೆ 6 ವಿಕೆಟ್‌ಗಳಿಗೆ ಡಿಕ್ಲೇರ್ ಮಾಡಿಕೊಂಡ ಬಳಿಕ ಪಾಕಿಸ್ತಾನಕ್ಕೆ ಗೆಲ್ಲುವುದಕ್ಕೆ 342 ರನ್ ಗುರಿಯನ್ನು ಹೊಂದಿತ್ತು. ಆದರೆ ಅವರು ಬರೀ 201 ರನ್‌ಗೆ ಆಲೌಟ್ ಆಗಿ ಸೋಲನುಭವಿಸಿದೆ. ಪಾಕಿಸ್ತಾನ ಟೀಗೆ ಸ್ವಲ್ಪ ಮುಂಚೆ ಮಧ್ಯಮಕ್ರಮಾಂಕದ ನಾಲ್ವರು ಆಟಗಾರರು ಕೇವಲ 23 ಎಸೆತಗಳಲ್ಲಿ ಒಂದು ರನ್ ಆಗುವಷ್ಟರಲ್ಲಿ ಪತನಗೊಂಡಿದ್ದರು.
ಪಾಕಿಸ್ತಾನ 124ಕ್ಕೆ 3 ವಿಕೆಟ್ ಕಳೆದುಕೊಂಡಿದ್ದಾಗ ಅದರ ಪತನ ಆರಂಭವಾಯಿತು. ಮಿಸ್ಬಾ ಉಲ್ ಹಕ್ ಸ್ಟೀವನ್ ಫಿನ್ ಎಸೆತಕ್ಕೆ ವಿಕೆಟ್ ಹಿಂದೆ ಕ್ಯಾಚ್ ಒಪ್ಪಿಸಿದರು. ಅಸದ್ ಶಫೀಕ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಅವರ ಎಸೆತಕ್ಕೆ ಪ್ಲಂಬ್ ಎಲ್‌ಬಿಡಬ್ಲ್ಯುಗೆ ಔಟಾದರು. ಪ್ರತಿಯೊಬ್ಬ ಮುಖ್ಯ ಬೌಲರೂ ತಲಾ ಎರಡು ವಿಕೆಟ್ ಕಬಳಿಸಿದ್ದು,ಇಂಗ್ಲೆಂಡ್ ಬೌಲರುಗಳ ವಿಶೇಷವಾಗಿತ್ತು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 297ಕ್ಕೆ 10 ವಿಕೆಟ್
ಪಾಕಿಸ್ತಾನ ಮೊದಲ ಇನ್ನಿಂಗ್ಸ್ 400ಕ್ಕೆ 10 ವಿಕೆಟ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 445ಕ್ಕೆ 6 ವಿಕೆಟ್
ಬ್ಯಾಟಿಂಗ್ ವಿವರ
ಅಲಸ್ಟೈರ್ ಕುಕ್ 66, ಅಲೆಕ್ಸ್ ಹೇಲ್ಸ್ 54, ಜೋಯಿ ರೂಟ್ 62, ಜೇಮ್ಸ್ ವಿನ್ಸ್ 42, ಜಾನಿ ಬೇರ್‌ಸ್ಟೋ 83 ಮತ್ತು ಮೊಯಿನ್ ಅಲಿ 86 ರನ್