ನಾಚಿಕೆಯಿಲ್ಲದ ನಡವಳಿಕೆ: ಕ್ಯಾಚ್ ಬಿಟ್ಟು ಡ್ಯಾನ್ಸ್ ಮಾಡಿದ ಜೈಸ್ವಾಲ್‌ , ಕ್ರಿಕೆಟ್‌ ಪ್ರೇಮಿಗಳು ಆಕ್ರೋಶ

Sampriya

ಬುಧವಾರ, 25 ಜೂನ್ 2025 (15:45 IST)
Photo Credit X
ನವದೆಹಲಿ: ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ಸೋಲು ಅನುಭವಿಸಿತು. 

ಸಾಮಾಜಿಕ ಜಾಲತಾಣದಲ್ಲಿ ಭಾರತದ ಫೀಲ್ಡಿಂಗ್ ಪ್ರದರ್ಶನ ಭಾರೀ ಚರ್ಚೆಗೆ ಕಾರಣವಾಯಿತು. ನಿರ್ಣಾಯಕ ಸಮಯದಲ್ಲೂ ಭಾರತದ ಕ್ರಿಕೆಟಿಗರು ಆಟವನ್ನು ಲಘುವಾಗಿ ಸ್ವೀಕರಿಸಿದ್ದು,  ಹಲವು ಕ್ಯಾಚ್‌ಗಳನ್ನು ಕೈಬಿಟ್ಟಿದ್ದೆ ಗಿಲ್ ಪಡೆಯ ಸೋಲಿಗೆ ಕಾರಣವಾಯಿತು ಎನ್ನಲಾಯಿತು. 

ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿದ್ದು ಕಳಪೆ ಫೀಲ್ಡಿಂಗ್ ಪ್ರದರ್ಶನ, ವಿಶೇಷವಾಗಿ ಯಶಸ್ವಿ ಜೈಸ್ವಾಲ್ ಅವರ ಬೇಜಬ್ದಾರಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್‌ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟು ಏಕೈಕ ಆಟಗಾರ. ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ಒಂದಾದ ಬೆನ್ ಡಕೆಟ್ ಅನ್ನು 97 ರನ್‌ಗೆ ಔಟ್‌ ಆಗುವ ಕ್ಯಾಚ್‌ ಅನ್ನು ಜೈಸ್ವಾಲ್ ಕೈಬಿಟ್ಟರು.

ಇನ್ನೂ ಕ್ಯಾಚ್ ಬಿಟ್ಟು ಕೆಲವೇ ನಿಮಿಷಗಳ ನಂತರ ಲಾಂಗ್-ಆನ್‌ನಲ್ಲಿ ಬೌಂಡರಿ ಹಗ್ಗದ ಬಳಿ ಜೈಸ್ವಾಲ್‌ ನಗುತ್ತಿರುವ ಮತ್ತು ನೃತ್ಯ ಮಾಡುತ್ತಿರುವುದು ಭಾರತ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಕ್ರಿಕೆಟ್ ಆಟಗಾರನೊಬ್ಬ ಗಮನ ಮತ್ತು ಕ್ರೀಡಾ ಬದ್ಧತೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. 

ಅನೇಕ ಅಭಿಮಾನಿಗಳು ಸಾಮಾಜಿಕ ವೇದಿಕೆಗಳಲ್ಲಿ ತಮ್ಮ ಕೋಪವನ್ನು ಹೊರಹಾಕಿದರು, ಜೈಸ್ವಾಲ್ ಅವರ ದುಬಾರಿ ತಪ್ಪುಗಳ ಹೊರತಾಗಿಯೂ ವಿಷಯಗಳನ್ನು ಲಘುವಾಗಿ ತೆಗೆದುಕೊಂಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ