ಮಳೆಯಿಂದ ಮೂರನೇ ಟೆಸ್ಟ್ ಆಟ ಸ್ಥಗಿತ: ಭಾರತ 50ಕ್ಕೆ 2 ವಿಕೆಟ್

ಶುಕ್ರವಾರ, 28 ಆಗಸ್ಟ್ 2015 (13:40 IST)
ಶ್ರೀಲಂಕಾ ಮತ್ತು ಭಾರತ ನಡುವೆ ಕೊಲಂಬೊದ ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 50 ರನ್ ಗಳಿಸಿದ್ದು ಮಳೆಯ ಕಾರಣ ಪಂದ್ಯ ಸ್ಥಗಿತಗೊಂಡಿದೆ. ಆರಂಭದಲ್ಲೇ ಲೋಕೇಶ್ ರಾಹುಲ್  ಮತ್ತು ಅಜಿಂಕ್ಯಾ ರಹಾನೆ ಔಟಾಗಿದ್ದರಿಂದ ಭಾರತ ಆಘಾತ ಅನುಭವಿಸಿತು.
ರಾಹುಲ್ ಇನ್ನಿಂಗ್ಸ್‌ನ ಎರಡನೇ ಎಸೆತಕ್ಕೆ ದಾಮ್ಮಿಕ ಬೌಲಿಂಗ್‌ನಲ್ಲಿ ಆಫ್ ಸ್ಟಂಪ್‌ಗೆ ಚೆಂಡು ಬಡಿದು ಬೌಲ್ಡ್ ಆದರು. 4 ನೇ ಓವರಿನಲ್ಲಿ ಪ್ರದೀಪ್ ಬೌಲಿಂಗ್‌ನಲ್ಲಿ ರಹಾನೆ ಎಲ್‌ಬಿಗೆ ಔಟಾದರು.
 
ಆದರೆ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟವಾಡಿದ್ದರಿಂದ ಭಾರತ 50 ರನ್ ಗಡಿಯನ್ನು ಮುಟ್ಟಿದೆ. ಕೊಹ್ಲಿ 14 ರನ್ ಮತ್ತು ಪೂಜಾರಾ 19 ರನ್‌ಗಳೊಂದಿಗೆ ಆಡುತ್ತಿದ್ದಾರೆ.

ಭಾರತ ಈ ಪಂದ್ಯದಲ್ಲಿ ಗೆದ್ದರೆ ಈಗಾಗಲೇ 1-1ರಿಂದ ಸಮಮಾಡಿಕೊಂಡಿರುವ ಭಾರತ ಸರಣಿ ಗೆಲ್ಲುವ ಮೂಲಕ 22 ವರ್ಷಗಳಿಂದ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲದಿರುವ ಕೊರತೆ ನೀಗುತ್ತದೆ. 

ವೆಬ್ದುನಿಯಾವನ್ನು ಓದಿ