ಭಾರತ ಟೆಸ್ಟ್ ತಂಡಕ್ಕೆ ಹೊಸ ನಾಯಕ, ಹೊಸ ಕಾರ್ಯವಿಧಾನ

ಶುಕ್ರವಾರ, 24 ಜುಲೈ 2015 (17:22 IST)
ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಕ್ರಿಕೆಟ್ ಆಡಲು ಬಯಸುತ್ತಾರೆ ಮತ್ತು ತಮಗೆ 20 ವಿಕೆಟ್‌ಗಳನ್ನು ಗಳಿಸಿಕೊಡುವ ಬೌಲರುಗಳನ್ನು ಬಯಸುತ್ತಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ಕಿರು ಸ್ವರೂಪದ ಪಂದ್ಯಗಳ ನಾಯಕರಾಗಿದ್ದು, ರನ್ ಹರಿವನ್ನು ನಿರ್ಬಂಧಿಸುವ ಬೌಲರುಗಳನ್ನು ಇಷ್ಟಪಡುತ್ತಾರೆ.

 
ಬಾಂಗ್ಲಾ ವಿರುದ್ಧ ಏಕದಿನ ಸರಣಿಯ ಬಳಿಕ ವೇಗದ ಬೌಲಿಂಗ್ ಮಾಡುವವರು ಬೇಕೇ ಅಥವಾ ಚೆನ್ನಾಗಿ ಲೈನ್, ಲೆಂಗ್ತ್ ಬೌಲ್ ಮಾಡುವವರು ಬೇಕೆ ಎಂದು ಕ್ರಿಕೆಟ್ ಚಿಂತಕರ ಚಾವಡಿ ನಿರ್ಧರಿಸಬೇಕು ಎಂದು ಧೋನಿ ಹೇಳಿದ್ದರು. 
 
ಪ್ರಸಕ್ತ ವೇಗಿಗಳ ಬಲ ಮತ್ತು ದೌರ್ಬಲ್ಯಗಳ ಬಗ್ಗೆ ಧೋನಿ ಏನೇ ಭಾವಿಸಲಿ  ಆದರೆ ರಾಷ್ಟ್ರೀಯ ಆಯ್ಕೆದಾರರು  ಕೊಹ್ಲಿಗೆ ಬೇಕಾದ ಬೌಲರುಗಳನ್ನು ನೀಡುವುದಾಗಿ ಗುರುವಾರ ಸ್ಪಷ್ಟಪಡಿಸಿದ್ದಾರೆ. ಆರಿಸಿಕೊಂಡ ಬೌಲರುಗಳು ಅತ್ಯುತ್ತಮರಾಗಿದ್ದು, ಧೋನಿ ಕಾಮೆಂಟ್‌ಗಳಿಗೆ ಬಿಸಿಸಿಐ ಪ್ರತಿಕ್ರಿಯಿಸಬೇಕು ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಧೋನಿ ಏನು ಹೇಳಿದ್ದಾರೆಂಬ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ನಾವು ಸೂಕ್ತ ಸಮತೋಲನ ತರಲು ಪ್ರಯತ್ನಿಸುತ್ತೇವೆ. ಶ್ರೀಲಂಕಾದಲ್ಲಿ ವಿಕೆಟ್‌‌ಗಳಿಗೆ ನಮ್ಮದು ಅತ್ಯುತ್ತಮ ಸಾಧ್ಯವಾದ ಬೌಲಿಂಗ್ ಸಂಯೋಜನೆ ಎಂದು ಭಾವಿಸಿದ್ದೇವೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ