ಏಕದಿನ ಪಂದ್ಯಗಳಲ್ಲಿ ಅತೀ ವೇಗದ 8000 ರನ್: ಡಿವಿಲಿಯರ್ಸ್ ಸಾಧನೆ

ಗುರುವಾರ, 27 ಆಗಸ್ಟ್ 2015 (14:11 IST)
ಏಕದಿನ ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಅನೇಕ ದಾಖಲೆಗಳನ್ನು ನುಚ್ಚುನೂರು ಮಾಡಿದ್ದಾರೆ. ಡರ್ಬನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನದ ಸಂದರ್ಭದಲ್ಲಿ  8000 ಏಕದಿನ ರನ್‌ಗಳನ್ನು ವೇಗವಾಗಿ ಮುಟ್ಟಿದ ಸಾಧನೆ ಮಾಡಿ ತಮ್ಮ ಕಿರೀಟಕ್ಕೆ ಇನ್ನೊಂದು ಗರಿ ಸಿಕ್ಕಿಸಿದ್ದಾರೆ.  ಡಿ ವಿಲಿಯರ್ಸ್ 8000 ರನ್‌ಗಳ ಗಡಿಯನ್ನು 182 ಇನ್ನಿಂಗ್ಸ್‌ಗಳಲ್ಲಿ ಮುಟ್ಟಿದ್ದಾರೆ. ಭಾರತದ ಸೌರವ್ ಗಂಗೂಲಿಗಿಂತ 18 ಇನ್ನಿಂಗ್ಸ್ ವೇಗವಾಗಿ ಮತ್ತು ಸಚಿನ್ ಅವರಿಗಿಂತ 28 ಇನ್ನಿಂಗ್ಸ್‌ವೇಗವಾಗಿ ಈ ಸ್ಕೋರ್ ಮುಟ್ಟಿದರು. 
 
 
ಡಿವಿಲಿಯರ್ಸ್ ಏಕ ದಿನ ಪಂದ್ಯಗಳಲ್ಲಿ ಅತೀ ವೇಗದ 50, ಅತೀ ವೇಗದ 100 ಮತ್ತು ಅತೀ ವೇಗದ 150 ರನ್ ಹೊಡೆದ ದಾಖಲೆ ನಿರ್ಮಿಸಿದ್ದಾರೆ. ಬಲಗೈ ಆಟಗಾರನ ಪ್ರತಿಭೆಗೆ ಹೆಚ್ಚು ತೊಂದರೆಗೆ ಒಳಗಾಗಿದ್ದು ವೆಸ್ಟ್ ಇಂಡೀಸ್.
 
 2015ರ ಜನವರಿಯಲ್ಲಿ ಜೋಹಾನ್ಸ್‌ಬರ್ಗ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನದಲ್ಲಿ ಕೇವಲ 16 ಎಸೆತಗಳಲ್ಲೇ ಅತೀ ವೇಗದ ಅರ್ಧ ಶತಕವನ್ನು ಬಾರಿಸಿದರು.  ಸನತ್ ಜಯಸೂರ್ಯ ಪಾಕಿಸ್ತಾನದ ವಿರುದ್ಧ ಸ್ಕೋರ್ ಮಾಡಿದ 17 ಎಸೆತಗಳಲ್ಲಿ ಅರ್ಧಶತಕದ ದಾಖಲೆಯನ್ನು ಅವರು ಮುರಿದರು. 
 
ಡಿ ವಿಲಿಯರ್ಸ್ ಕೇವಲ 31 ಎಸೆತಗಳಲ್ಲಿ ಶತಕ ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ಕೋರಿ ಆಂಡರ್‌ಸನ್ ವೆಸ್ಟ್ ಇಂಡೀಸ್ ವಿರುದ್ಧ 36 ಎಸೆತಗಳ ಶತಕದ ದಾಖಲೆಯನ್ನು ಮುರಿದಿದ್ದಾರೆ. ಅದೇ ಪಂದ್ಯದಲ್ಲಿ ವಿಲಿಯರ್ಸ್ 16 ಸಿಕ್ಸರುಗಳನ್ನು ಬಾರಿಸಿದರು. ರೋಹಿತ್ ಶರ್ಮಾ ಆಸ್ಟ್ರೇಲಿಯಾದ ವಿರುದ್ಧ ಬೆಂಗಳೂರಿನಲ್ಲಿ ಮಾಡಿದ ದಾಖಲೆಯನ್ನು ಸಮಗೊಳಿಸಿದರು. 
 
 2015 ಐಸಿಸಿ ವಿಶ್ವಕಪ್‌ನಲ್ಲಿ ಡಿ ವಿಲಿಯರ್ಸ್ ಏಕದಿನ ಇತಿಹಾಸದಲ್ಲಿ ಅತೀ ವೇಗದ 150 ರನ್ ಬಾರಿಸಿದರು. ಮತ್ತೊಮ್ಮೆ ವೆಸ್ಟ್ ಇಂಡೀಸ್ ತಂಡ ಅವರಿಗೆ ಬಲಿಪಶುವಾಗಿತ್ತು. 

ವೆಬ್ದುನಿಯಾವನ್ನು ಓದಿ