ಭಾರತ ಪ್ರವಾಸಕ್ಕೆ ಮುನ್ನ ಮಾರಿಷಸ್‌ನಲ್ಲಿ ಪುತ್ರನೊಂದಿಗೆ ಡಿ ವಿಲಿಯರ್ಸ್

ಶನಿವಾರ, 19 ಸೆಪ್ಟಂಬರ್ 2015 (13:59 IST)
ದಕ್ಷಿಣ ಆಫ್ರಿಕಾದ ಏಕದಿನ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಭಾರತದ ವಿರುದ್ಧ ಅಕ್ಟೋಬರ್ 2ರಿಂದ ಮೊದಲ ಏಕದಿನ ಪಂದ್ಯದೊಂದಿಗೆ 72 ದಿನಗಳ ಪ್ರವಾಸಕ್ಕೆ ಮುನ್ನ ಮಾರಿಷಸ್‌ನಲ್ಲಿ ತಮ್ಮ ಕುಟುಂಬದ ಜತೆ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪುತ್ರನ ಜತೆಗಿರುವ ಚಿತ್ರವನ್ನು ಡಿ ವಿಲಿಯರ್ಸ್ ಹಂಚಿಕೊಂಡಿದ್ದು, ಅದರಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ. ನಾವು ಮಾರಿಷಸ್ ಪ್ರೀತಿಸುತ್ತೇವೆ. ಕುಟುಂಬದ ಜತೆ ಹಿತಕರ ಕಾಲ ಕಳೆಯುತ್ತಿದ್ದೇನೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ
.
 ದಕ್ಷಿಣ ಆಫ್ರಿಕಾವು ಮೂರು ಟಿ 20ಗಳನ್ನು, ಐದು ಏಕದಿನಗಳು ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಭಾರತದಲ್ಲಿ ಆಡಲಿದೆ. ಭಾರತದ ನೆಲದಲ್ಲಿ ಮೊದಲ ಬಾರಿಗೆ ಹರಿಣಗಳು ಟಿ20 ಪಂದ್ಯವನ್ನು ಆಡುತ್ತಿದ್ದಾರೆ ಮತ್ತು 1992/93ರಿಂದೀಚೆಗೆ ಭಾರತದ ವಿರುದ್ಧ ಇದು ಅವರ ಚೊಚ್ಚಲ ನಾಲ್ಕು ಟೆಸ್ಟ್ ಸರಣಿಯಾಗಿದೆ. 
 
ಭಾರತದಲ್ಲಿ ಕ್ರಿಕೆಟ್ ಆಟದ ವಿಪುಲ ಅನುಭವವನ್ನು ಡಿ ವಿಲಿಯರ್ಸ್ ಹೊಂದಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡುತ್ತಿದ್ದು, ಅಭಿಮಾನಿಗಳಿಗೆ ನೆಚ್ಚಿನ ಆಟಗಾರರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ