ಅನಿಲ್ ಕುಂಬ್ಳೆ ಬೆಂಬಲಕ್ಕೆ ನಿಂತ ಸಚಿನ್, ಗಂಗೂಲಿ, ಲಕ್ಷ್ಮಣ್

ಶುಕ್ರವಾರ, 9 ಜೂನ್ 2017 (11:12 IST)
ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನ ಅಲಂಕರಿಸಿ ವರ್ಷ ಕಳೆದಿದೆ. ಆಂತರಿಕ ವಿಷಯಗಳಿಂದಾಗಿ ಅನಿಲ್ ಕುಂಬ್ಳೆಯನ್ನ ಕೋಚ್ ಹುದ್ದೆಯಿಂದ ಕೆಳಗಿಳಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಆದರೆ, ಕುಂಬ್ಳೆಗೆ ಹಳೆಯ ಟೀಮ್ ಮೇಟ್`ಗಳ ಬೆಂಬಲ ಸಿಕ್ಕಿದೆ.

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ನೇತೃತ್ವದ ಬಿಸಿಸಿಐ ಸಲಹಾ ಸಮಿತಿ ಅನಿಲ್ ಕುಂಬ್ಳೆಯನ್ನ ಹೆಡ್ ಕೋಚ್ ಹುದ್ದೆಯಲ್ಲಿ ಮುಂದುವರೆಸಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಕಳೆದ ರಾತ್ರಿ ಸಭೆ ಸೇರಿದ್ದ ಸಲಹಾ ಸಮಿತಿಯ ಮೂವರೂ ದಿಗ್ಗಜರು ಕೋಚ್ ಸ್ಥಾನಕ್ಕೆ ಪರ್ಯಾಯ ವ್ಯಕ್ತಿಯನ್ನ ತರುವ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಿದೆ. ವಿರಾಟ್ ಕೊಹ್ಲಿ ಇಚ್ಛಿಸಿರುವ ರವಿಶಾಸ್ತ್ರೀ ಕುರಿತಂತೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ, ಅಂತಿಮವಾಗಿ ಕುಂಬ್ಳೆಯನ್ನೇ ಮುಂದುವರೆಸುವ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.  

ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾ ಗುರು ಕುಂಬ್ಳೆ ಕೋಚಿಂಗ್`ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಸಲಹಾ ಸಮಿತಿ ಪರಿಗಣಿಸಿರುವ ಪ್ರಮುಖ ಅಂಶ ಎನ್ನಲಾಗಿದೆ. ಉತ್ತಮ ಪ್ರದರ್ಶನದ ಹೊರತಾಗಿಯೂ ಕುಂಬ್ಳೆಗೆ ಗೇಟ್ ಪಾಸ್ ನೀಡುವುದು ಹೇಗೆ ಎಂಬ ಪ್ರಶ್ನೆ ಸಲಹಾ ಸಮಿತಿಯನ್ನ ಕಾಡಿದೆ.  

ಸಲಹಾ ಸಮಿತಿ ಸಭೆ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ, `ಸಭೆ ಸೇರಿದ್ದ ಸಲಹಾ ಸಮಿತಿ ಹೆಡ್ ಕೋಚ್ ಆಯ್ಕೆ ಕುರಿತಂತೆ ಚರ್ಚೆ ನಡೆಸಿದೆ. ಸಲಹಾ ಸಮಿತಿ ವರದಿ ಆಧರಿಸಿ ಅನಿಲ್ ಕುಂಬ್ಳೆ ಮುಂದುವರಿಕೆ ಅಥವಾ ಅವರ ಸ್ಥಾನಕ್ಕೆ ಬೇರೆಯವರ ಆಯ್ಕೆ ನಡೆದರೆ 2019ರ ವಿಶ್ವಕಪ್`ವರೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತೆ. ಸೂಕ್ತ ಸಂದರ್ಭದಲ್ಲಿ ಸಲಹಾ ಸಮಿತಿ ಬಿಸಿಸಿಐಗೆ ವರದಿ ನೀಡಲಿದೆ ಎಂದು ತಿಳಿಸಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ