ಹಾರ್ದಿಕ್-ಕೆಎಲ್ ರಾಹುಲ್ ಮಾಡಿದ ತಪ್ಪನ್ನು ವಿರಾಟ್ ಕೊಹ್ಲಿಯೂ ಮಾಡಿದ್ದರೇ?

ಸೋಮವಾರ, 14 ಜನವರಿ 2019 (09:21 IST)
ಮುಂಬೈ: ಮಹಿಳೆಯರ ಬಗ್ಗೆ ಕಾಫಿ ವಿತ್ ಕರಣ್ ಶೋನಲ್ಲಿ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಕ್ಕೆ ನಿಷೇಧ ಶಿಕ್ಷೆಗೊಳಗಾಗಿರುವ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಪ್ರಕರಣದ ಬೆನ್ನಲ್ಲೇ ವಿರಾಟ್ ಕೊಹ್ಲಿ ಮಹಿಳೆಯೊಬ್ಬರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ಕೊಹ್ಲಿ ಕೂಡಾ ಟಾಕ್ ಶೋ ಒಂದರಲ್ಲಿ ಸಂದರ್ಶಕರು ಕೇಳಿದ ಪ್ರಶ್ನೆಗೆ ಮಹಿಳೆ ಬಗ್ಗೆ ಹಗುರವಾಗಿ ಕಾಮೆಂಟ್ ಮಾಡುತ್ತಾರೆ. ಈ ಹಳೆಯ ವಿಡಿಯೋವನ್ನು ವ್ಯಕ್ತಿಯೊಬ್ಬರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು ಕೊಹ್ಲಿಗೆ ಯಾವಾಗ ನಿಷೇಧ ಶಿಕ್ಷೆ ವಿಧಿಸುತ್ತೀರಿ ಎಂದು ಬಿಸಿಸಿಐನನ್ನು ಪ್ರಶ್ನೆ ಮಾಡಿದ್ದಾರೆ.

ನೀವು ಎದುರಿಸಿದ ಅತೀ ಚಿಕ್ಕ ಡೇಟಿಂಗ್ ಕ್ಷಣ ಯಾವುದು ಎಂದು ಸಂದರ್ಶಕರು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಕೊಹ್ಲಿ ಐದು ನಿಮಿಷದ ಡೇಟಿಂಗ್ ಮಾಡಿ ಹುಡುಗಿಯನ್ನು ನೋಡಿ ಓಡಿ ಹೋದೆ ಎನ್ನುತ್ತಾರೆ. ಯಾಕೆ ಎಂದು ಸಂದರ್ಶಕರು ಕೇಳಿದ್ದಕ್ಕೆ ಕೊಹ್ಲಿ ಆ ಹುಡುಗಿ ಕೆಟ್ಟದಾಗಿದ್ದಳು ಎಂದು ಉತ್ತರಿಸುತ್ತಾರೆ. ಹೀಗೆ ಹುಡುಗಿಯ ಸೌಂದರ್ಯದ ಬಗ್ಗೆ ಕೆಟ್ಟದಾಗಿ ಹೇಳಿದ್ದೂ ತಪ್ಪಲ್ಲವೇ ಎಂದು ಟ್ವಿಟರಿಗರು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ