ಐಪಿಎಲ್ ಪಂದ್ಯಗಳನ್ನು ಕೂಡ ಮಿಸ್ ಮಾಡಿಕೊಂಡ ಧರ್ಮಶಾಲಾ

ಶನಿವಾರ, 12 ಮಾರ್ಚ್ 2016 (12:26 IST)
ಹೆಚ್ಚು ಗಮನ ಸೆಳೆದ ಭಾರತ-ಪಾಕಿಸ್ತಾನ ವಿಶ್ವ ಟಿ 20 ಪಂದ್ಯವು ಧರ್ಮಶಾಲಾಯಿಂದ ಕೋಲ್ಕತಾಗೆ ಸ್ಥಳಾಂತರಗೊಂಡ ಬಳಿಕ, ಮುಂಬರುವ ಸೀಸನ್‌ನ ಐಪಿಎಲ್ ಪಂದ್ಯಗಳ ಆತಿಥ್ಯ ವಹಿಸುವುದನ್ನು ಕೂಡ ಧರ್ಮಶಾಲಾ ಸ್ಟೇಡಿಯಂ ಮಿಸ್ ಮಾಡಿಕೊಳ್ಳಲಿದೆ. 
 
ಧರ್ಮಶಾಲಾವನ್ನು ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದ್ದ ಕಿಂಗ್ಸ್ ಇಲೆವನ್ ಪಂಜಾಬ್ , ತಮ್ಮ ಪಾಲಿಗೆ ಬಂದಿರುವ ಪಂದ್ಯಗಳನ್ನು ಎಚ್‌ಪಿಸಿಎ ಸ್ಟೇಡಿಯಂನಿಂದ ನಾಗಪುರದ ವಿಸಿಎ ಸ್ಟೇಡಿಯಂಗೆ ಸ್ಥಳಾಂತರ ಮಾಡುವಂತೆ ಕೋರಿದ್ದಾರೆ. ಇತ್ತೀಚಿನ ಐಪಿಎಲ್ ವೇಳಾಪಟ್ಟಿಯಲ್ಲಿ ಧರ್ಮಶಾಲಾವನ್ನು ಆಡುವ ಮೈದಾನವಾಗಿ ಹೆಸರಿಸಿಲ್ಲ.
ಆಟಗಾರರಿಗೆ ಮತ್ತು ಅಧಿಕಾರಿಗಳಿಗೆ ಭದ್ರತೆ ಒದಗಿಸಲು ಹಿಮಾಚಲ ಸರ್ಕಾರ ಭಾರೀ ಮೊತ್ತದ ಶುಲ್ಕವನ್ನು ಹೇರುತ್ತಿದೆ ಮತ್ತು ದುಬಾರಿ ಮನರಂಜನೆ ತೆರಿಗೆಯನ್ನು ಕೂಡ ಹೇರುತ್ತಿದೆ. ಇವೆರಡು ಅಂಶಗಳಿಂದ ಕಿಂಗ್ಸ್ ಇಲೆವನ್ ನಾಗ್ಪುರವನ್ನು ತವರು ಮೈದಾನವಾಗಿ ಬಯಸುವುದಕ್ಕೆ ದೊಡ್ಡ ಪಾತ್ರವಹಿಸಿದೆ. 
 
 ಇದಲ್ಲದೇ ಕಿಂಗ್ಸ್ ಇಲೆವನ್ ತಂಡವು ನಾಗ್ಪುರ ಕ್ರೀಡಾಂಗಣದಲ್ಲಿ ಗೇಟ್ ಮನಿಯಿಂದ ಹೆಚ್ಚು ಲಾಭ ಗಳಿಸಲಿದೆ. ಬಿಸಿಸಿಐಗೆ ಬರೆದ ಲಿಖಿತ ಪತ್ರದಲ್ಲಿ ಕಿಂಗ್ಸ್ ಇಲೆವನ್ ಈ ವಿಷಯಗಳನ್ನು ಉದಾಹರಿಸಿದೆ. ಕಳೆದ ವರ್ಷ ಕೂಡ ಧರ್ಮಶಾಲಾದಲ್ಲಿ ಐಪಿಎಲ್ ಪಂದ್ಯಗಳು ನಡೆದಿರಲಿಲ್ಲ.
 
 ಎಚ್‌ಪಿಸಿಎ ವಕ್ತಾರ ಸಂಜಯ್ ಶರ್ಮಾ ಧರ್ಮಶಾಲಾಗೆ ಸಿಗಬೇಕಾದ ಪಾಲು ಸಿಗದಿರುವ ಬಗ್ಗೆ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ನೇತೃತ್ವದ ಸರ್ಕಾರದ ರಾಜಕೀಯದ ದೆಸೆಯಿಂದ ಫ್ರಾಂಚೈಸಿಗಳು ಇಲ್ಲಿ ಪಂದ್ಯ ಆಯೋಜಿಸುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಎಚ್‌ಪಿಸಿಎ ವರ್ಚಸ್ಸನ್ನು ನೇರವಾಗಿ ಅಥವಾ ಪರೋಕ್ಷವಾಗಿ ಹಾನಿ ಮಾಡಲು ಅವರು ಯತ್ನಿಸುತ್ತಿದ್ದಾರೆ. ಏಕೆಂದರೆ ಮಂಡಳಿಯ ಅಧ್ಯಕ್ಷ ಅನುರಾಗ್ ಠಾಕೂರ್ ಬಿಜೆಪಿಗೆ ಸೇರಿದವರು ಎಂದು ಅವರು ಹೇಳಿದರು. 
ಹಿಮಾಚಲ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಅನುರಾಗ್ ಠಾಕೂರ್ ನಡುವೆ ಸೆಣಸಿನಲ್ಲಿ ಕ್ರಿಕೆಟ್ ಮತ್ತು ಅದರ ಅಭಿಮಾನಿಗಳಿಗೆ ಘಾಸಿಯಾಗಿದೆ.

ವೆಬ್ದುನಿಯಾವನ್ನು ಓದಿ