ವಿರಾಟ್ ಕೊಹ್ಲಿ ಕಮ್ ಬ್ಯಾಕ್: ಪೂಜಾರ-ರೆಹಾನೆ ಔಟ್?
ವಿಪರ್ಯಾಸವೆಂದರೆ ಇಬ್ಬರೂ ಈಗ ನಾಯಕ ಮತ್ತು ಉಪನಾಯಕನ ಜವಾಬ್ಧಾರಿ ಹೊತ್ತಿದ್ದಾರೆ. ಆದರೆ ಸಾಕಷ್ಟು ಅವಕಾಶ ಸಿಕ್ಕಿಯೂ ಇಬ್ಬರೂ ತಮ್ಮ ಫಾರ್ಮ್ ಕಂಡುಕೊಳ್ಳಲು ವಿಫಲರಾಗಿದ್ದಾರೆ.
ಇದೀಗ ಶ್ರೇಯಸ್ ಐಯರ್ ಮೊದಲ ಪಂದ್ಯದಲ್ಲೇ ಶತಕ-ಅರ್ಧಶತಕ ಗಳಿಸಿ ಮಿಂಚಿದ ಕಾರಣ ಅವರನ್ನು ಹೊರಗಿಟ್ಟು ಪೂಜಾರ ಅಥವಾ ರೆಹಾನೆಯನ್ನು ಉಳಿಸಿಕೊಳ‍್ಳುವ ತಪ್ಪನ್ನು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮಾಡದು. ಹೀಗಾಗಿ ಕೊಹ್ಲಿ ತಂಡಕ್ಕೆ ಬರುವ ಬೆನ್ನಲ್ಲೇ ಪೂಜಾರ ಅಥವಾ ರೆಹಾನೆ ಸ್ಥಾನ ಕಳೆದುಕೊಳ್ಳುವುದು ಖಚಿತ.