ಔಟ್ ಎಂದು ಬೆರಳು ತೋರಿಸಲು ಹೋಗಿ ಸುಮ್ಮನಾದ ಅಂಪೈರ್

ಸೋಮವಾರ, 20 ಮಾರ್ಚ್ 2017 (09:54 IST)
ರಾಂಚಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಕುತೂಹಲಕರ ಘಟನೆ ನಡೆದಿದೆ. ಈ ಪ್ರಸಂಗ ಕಾಮೆಂಟೇಟರ್ಸ್, ಪ್ರೇಕ್ಷಕರು ಮತ್ತು ಆಟಗಾರರನ್ನ ನಗೆಗಡಲ್ಲಿ ತೇಲಿಸಿದ್ದಲ್ಲದೆ ಅಂಪೈರ್ ದಕ್ಷತೆ ಪ್ರಶ್ನಿಸುವಂತೆ ಮಾಡಿದೆ. ನ್ಯೂಜಿಲೆಂಡ್ ಅಂಪೈರ್ ಕ್ರಿಸ್ ಗೆಫನೆವ್  ನಡೆದುಕೊಂಡ ರೀತಿ ಇದಕ್ಕೆ ಕಾರಣ.

140 ರನ್ ಗಳಿಸಿ ಬ್ಯಾಟಿಂಗ್  ಮಾಡುತ್ತಿದ್ದ ಚೆತೇಶ್ವರ್ ಪೂಜಾರ, ಹೇಜಲ್ವುಡ್ ಎಸೆದ ಬೌನ್ಸರ್ ಅನ್ನ ಜೋರಾಗಿ ಬಾರಿಸಲು ಮುಂದಾದರು. ಆದರೆ, ಚೆಂಡು ಬ್ಯಾಟಿಗೆ ಸಿಗಲಿಲ್ಲ. ಬಾಲ್ ನೇರ ಕೀಪರ್ ಮ್ಯಾಥ್ಯೂ ವೇಡ್ ಕೈಸೇರಿತು. ಈ ಸಂದರ್ಭ ಬೌಲರ್ ಮತ್ತು ಕೀಪರ್ ಕಡೆಯಿಂದ ಅಗ್ರೇಸ್ಸಿವ್ ಅಪೀಲ್ ಬರಲಿಲ್ಲ. ಇದರಿಂದ ಕನ್ ಫ್ಯೂಶನ್`ಗೆ ಒಳಗಾದ ಅಂಪೈರ್ ಔಟ್ ಎಂದು ಬೆರಳನ್ನ ಮೇಲೆತ್ತಲು ಹೋಗಿ ಬಳಿಕ ತಲೆ ಕೆರೆದುಕೊಂಡು ಬೆರಳು ಕೆಳಗಿಳಿಸಿದರು. ಟಿವಿ ಪರದೆ ಮೇಲೆ ಈ ದೃಶ್ಯ ಕಂಡ ಅಭಿಮಾನಿಗಳು ನಗೆಗಡಲಲ್ಲಿ ತೇಲಿದರು.

ಅಂದಹಾಗೆ ಅಂಪೈರ್ ತಮ್ಮದೇ ನಿರ್ಧಾರ ಕೈಗೊಳ್ಳದೆ ಸಂಪೂರ್ಣ ಅಪೀಲ್ ಮೇಲೆ ಡಿಪೆಂಡ್ ಆಗಿರುತ್ತಿರಾ..? ಔಟ್ ಆಗಿದ್ದರೂ ಅಪೀಲ್ ಸರಿಯಾಗಿ ಆಗದಿದ್ದರೆ ನಿರ್ಧಾರ ಕೈಗೊಳ್ಳುವುದಿಲ್ಲವೇ..? ಕೊನೆಯ ಪಕ್ಷ ಮೂರನೇ ಅಂಪೈರ್`ಗೆ ಸೂಚಿಸುವುದನ್ನ ಮರೆತಿದ್ದೇಕೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ವೆಬ್ದುನಿಯಾವನ್ನು ಓದಿ