ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

Krishnaveni K

ಶನಿವಾರ, 14 ಜೂನ್ 2025 (18:06 IST)
Photo Credit: X
ಲಂಡನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಡಬ್ಲ್ಯುಟಿಸಿ ಫೈನಲ್ ಗೆದ್ದು ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ ಸಿಕ್ಕಂತಾಗಿದೆ.

ದಕ್ಷಿಣ ಆಫ್ರಿಕಾ ಇದುವರೆಗೆ ಐಸಿಸಿ ಟ್ರೋಫಿ ಗೆದ್ದಿರಲಿಲ್ಲ. ಆದರೆ ಇದೀಗ ಡಬ್ಲ್ಯುಟಿಸಿ ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್ ಗಳಿಂದ ಸೋಲಿಸಿದ ಆಫ್ರಿಕಾ ಮೊದಲ ಬಾರಿಗೆ ಐಸಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ. ಇದರೊಂದಿಗೆ ತಂಡದ ಚೋಕರ್ಸ್ ಪಟ್ಟವೂ ಕಳೆದುಹೋಗಿದೆ.

ಈ ಪ್ರಶಸ್ತಿ ಗೆಲ್ಲುತ್ತಿದ್ದಂತೇ ಮೈದಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ  ವಿಲಿಯರ್ಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಇದಕ್ಕೆ ಕಾರಣವೂ ಇದೆ. ಎಬಿಡಿಗೆ ಇದು ಡಬಲ್ ಖುಷಿ ಪಡುವ ಸಂದರ್ಭ. ಯಾಕೆಂದರೆ ಐಪಿಎಲ್ ನಲ್ಲಿ ತಾವು ಪ್ರತಿನಿಧಿಸಿದ್ದ ಆರ್ ಸಿಬಿ ಕೂಡಾ ಇದೇ ತಿಂಗಳು ಮೊದಲ ಬಾರಿಗೆ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.

ವಿಶೇಷವೆಂದರೆ ಎರಡೂ ತಂಡದಲ್ಲೂ ಎಬಿಡಿ ಅವಿಭಾಜ್ಯ ಅಂಗವಾಗಿದ್ದರು. ಎರಡೂ ತಂಡದಿಂದ ಅವರು ನಿವೃತ್ತಿಯಾಗಿದ್ದಾರೆ. ಆದರೆ ಎರಡೂ ತಂಡಗಳೂ ಫೈನಲ್ ಆಡುವಾಗ ಮೈದಾನದಲ್ಲೇ ಇದ್ದು ಸಂಭ್ರಮ ಕಣ್ತುಂಬಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಆರ್ ಸಿಬಿ ಫೈನಲ್ ಗೆದ್ದಾಗ ಸಂಭ್ರಮಿಸಿದ್ದ ಎಬಿಡಿಗೆ ಈಗ ತಮ್ಮ ದೇಶ ಮೊದಲ ಐಸಿಸಿ ಕಪ್ ಗೆದ್ದ ಖುಷಿ ಎದ್ದು ಕಾಣುತ್ತಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ