ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಜಿಂಕ್ಯಾ ರೆಹಾನೆ ಹೊಗಳಿಕೆ

ಮಂಗಳವಾರ, 8 ನವೆಂಬರ್ 2016 (11:01 IST)
ರಾಜಕೋಟ್:  ಎಂಎಸ್ ಧೋನಿಯಿಂದ ವಿರಾಟ್ ಕೊಹ್ಲಿ ಸಾಕಷ್ಟು ಕಲಿತಿದ್ದಾರೆ. ಅವರೊಬ್ಬ ಪರಿಪೂರ್ಣ ಟೀಂ ಮ್ಯಾನ್ ಎಂದು ಅಜಿಂಕ್ಯಾ ರೆಹಾನೆ ಹೊಗಳಿದ್ದಾರೆ.

ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ನಾಯಕನ ಗುಣಗಾನ ಮಾಡಿದ್ದಾರೆ. ಈ ಸರಣಿಯಲ್ಲಿ ಡಿಆರ್ ಎಸ್ ಪದ್ಧತಿ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದ್ದು ಆ ಬಗ್ಗೆ ಮಾತನಾಡಿದ ರೆಹಾನೆ ತಂಡದಲ್ಲಿ ಈ ಹೊಸ ತಂತ್ರಜ್ಞಾನದ ಬಗ್ಗೆ ಚರ್ಚಿಸುತ್ತಿದ್ದೇವೆ. ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲಿದ್ದೇವೆ ಎಂದರು.

ಆದರೆ ಈ ತಂತ್ರಜ್ಞಾನವನ್ನೇ ನಂಬಿಕೊಂಡು ಕೂತಿಲ್ಲ. ಉತ್ತಮ, ಆಕ್ರಮಣಕಾರಿ ಕ್ರಿಕೆಟ್ ಆಡುವುದಷ್ಟೇ ನಮ್ಮ ಗುರಿ ಎಂದು ರೆಹಾನೆ ಸ್ಪಷ್ಟಪಡಿಸಿದ್ದಾರೆ.  ಅಲ್ಲದೆ ಇಂಗ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಸ್ಪಿನ್ ಬೌಲಿಂಗ್ ಅಷ್ಟೊಂದು ಪ್ರಬಲವಲ್ಲದಿದ್ದರೂ, ಅವರ ಬ್ಯಾಟಿಂಗ್ ಅನುಭವಿಗಳಿಂದ ಕೂಡಿದೆ ಎಂದು ರೆಹಾನೆ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ