Ajinkya Rehane: ಹೈಪ್ ಇಲ್ಲ, ಓವರ್ ಆಕ್ಟಿಂಗ್ ಇಲ್ಲ, ಕೂಲ್ ಕ್ಯಾಪ್ಟನ್ ಅಜಿಂಕ್ಯಾ ರೆಹಾನೆ

Krishnaveni K

ಶನಿವಾರ, 12 ಏಪ್ರಿಲ್ 2025 (08:21 IST)
Photo Credit: X
ಚೆನ್ನೈ: ಐಪಿಎಲ್ 2025 ರಲ್ಲಿ ಅಜಿಂಕ್ಯಾ ರೆಹಾನೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಆಯ್ಕೆಯಾದಾಗ ಅನೇಕರು ಹುಬ್ಬೇರಿಸಿದ್ದರು. ಬೇರೆ ಯಾರೂ ಸಿಗಲಿಲ್ವಾ ಎಂದು ಲೇವಡಿ ಮಾಡಿದ್ದರು. ಆದರೆ ಈಗ ಕೆಕೆಆರ್ ತಂಡವನ್ನು ಯಶಸ್ವಿಯಾಗಿ ರೆಹಾನೆ ಮುನ್ನಡೆಸುತ್ತಿರುವ ರೀತಿಗೆ ಅಭಿಮಾನಿಗಳು ಮನಸೋತಿದ್ದಾರೆ.

ಮೈದಾನದಲ್ಲಿ ಹೈಪ್, ಓವರ್ ಆಕ್ಟಿಂಗ್, ಡ್ರಾಮಾ ಇದ್ದರೇ ನಾಯಕ ಎನ್ನುವ ಮನಸ್ಥಿತಿಯನ್ನು ತೊಡೆದು ಅಜಿಂಕ್ಯಾ ರೆಹಾನೆ ಕೂಲ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೆಕೆಆರ್ ತಂಡ ಆಡಿದ ಆರು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಈಗ ಮೂರನೇ ಸ್ಥಾನದಲ್ಲಿದೆ.

ಪ್ರತೀ ಪಂದ್ಯದಲ್ಲೂ ನಾಯಕನಾಗಿ ರೆಹಾನೆ ಕೊಡುಗೆ ನೀಡಿದ್ದಾರೆ. ಟೆಸ್ಟ್ ಬ್ಯಾಟಿಗ ಎನ್ನುವ ಹಣೆ ಪಟ್ಟಿ ಹೊಂದಿದ್ದ ರೆಹಾನೆ ಪ್ರತೀ ಪಂದ್ಯದಲ್ಲೂ ನಿರಾಯಾಸವಾಗಿ ದೊಡ್ಡ ಹೊಡೆತಗಳನ್ನು ಹೊಡೆಯುವುದು ನೋಡಿದರೆ ಇವರನ್ನು ತಪ್ಪು ತಿಳಿದುಕೊಂಡು ಬಿಟ್ಟೆವೇನೋ ಅನಿಸುತ್ತದೆ. ಕ್ಯಾಪ್ಟನ್ಸಿ ವಿಚಾರದಲ್ಲೂ ಅಷ್ಟೇ. ಬೌಲಿಂಗ್ ಚೇಂಜ್ ಮಾಡುವಾಗ, ಫೀಲ್ಡಿಂಗ್ ಸೆಟ್ ಮಾಡುವಾಗ ತಮ್ಮ ಅನುಭವದ ಝಲಕ್ ತೋರಿಸುತ್ತಿದ್ದಾರೆ.

ಗೆದ್ದರೂ, ಸೋತರೂ ಯಾವುದೇ ಅತಿರೇಕದ ವರ್ತನೆಯಿಲ್ಲದೇ ಪೆವಿಲಿಯನ್ ಗೆ ನಗು ನಗುತ್ತಾ ತೆರಳುವ ರೆಹಾನೆ ಈ ಐಪಿಎಲ್ ನ ಕೂಲೆಸ್ಟ್ ಕ್ಯಾಪ್ಟನ್ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ