ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಲಂಡನ್ ವಿಮಾನವೇರಿದ್ದ ಕೊಹ್ಲಿ ಇಂದು ಮತ್ತೆ ಬಂದ್ರು
ಆರ್ ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದಲೇ ಬಂದಿದ್ದ ವಿರಾಟ್ ಕೊಹ್ಲಿ ಬಳಿಕ ಕಾಲ್ತುಳಿತ ದುರಂತವಾದ ಬಳಿಕ ಬೇಸರದಿಂದಲೇ ಲಂಡನ್ ವಿಮಾನವೇರಿದ್ದರು. ಇದಾದ ಬಳಿಕ ಅವರು ಭಾರತಕ್ಕೆ ಕಾಲಿಡಲೇ ಇಲ್ಲ.
ಇದೀಗ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಅವರು ತಂಡದ ಜೊತೆ ನಾಳೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಕಾರಣಕ್ಕೆ ಅವರು ಭಾರತಕ್ಕೆ ಬಂದಿಳಿದಿದ್ದಾರೆ.
ಇದೀಗ ಲಂಡನ್ ವಾಸಿಯಾಗಿರುವ ಕೊಹ್ಲಿ ಪಂದ್ಯಗಳಿದ್ದಾಗ ಮಾತ್ರ ಭಾರತಕ್ಕೆ ಬರುತ್ತಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ನಾಲ್ಕು ತಿಂಗಳ ಬಳಿಕ ಕೊಹ್ಲಿಯನ್ನು ನೋಡಿ ಅಭಿಮಾನಿಗಳು, ಪಪ್ಪರಾಜಿಗಳು ಫುಲ್ ಖುಷಿಯಾಗಿದ್ದರು. ಕೆಲವರು ಸೆಲ್ಫೀ ನೀಡುವಂತೆಯೂ ಮನವಿ ಮಾಡಿದ್ದರು. ಆದರೆ ಯಾರ ಮನವಿಗೂ ಕಿವಿಗೊಡದೇ ಕೊಹ್ಲಿ ಮಾತನಾಡದೇ ಕಾರು ಏರಿ ಹೋಗಿದ್ದಾರೆ.