ಅಜಿಂಕ್ಯಾ ರೆಹಾನೆಗೆ ತೆರೆಯುತ್ತಾ ಟೀಂ ಇಂಡಿಯಾ ಬಾಗಿಲು?

ಬುಧವಾರ, 12 ಏಪ್ರಿಲ್ 2023 (08:30 IST)
WD
ಮುಂಬೈ: ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಭುತ ಬ್ಯಾಟಿಂಗ್ ನಡೆಸುತ್ತಿರುವ ಹಿರಿಯ ಬ್ಯಾಟಿಗ ಅಜಿಂಕ್ಯಾ ರೆಹಾನೆ ಮತ್ತೆ ಟೀಂ ಇಂಡಿಯಾಗೆ ಮರಳುವ ವಿಶ್ವಾಸದಲ್ಲಿದ್ದಾರೆ.

ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ರೆಹಾನೆ ಕಳಪೆ ಫಾರ್ಮ್ ನಿಂದಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಿಲ್ಲ. ಒಂದು ಕಾಲದಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಟೆಸ್ಟ್ ಫಾರ್ಮ್ಯಾಟ್ ನಲ್ಲಿ ನಾಯಕರಾಗಿಯೂ ಮುನ್ನಡೆಸಿದ್ದ ರೆಹಾನೆಗೆ ಇಂದು ತಂಡದಲ್ಲಿ ಸ್ಥಾನವೇ ಇಲ್ಲ.

ಐಪಿಎಲ್ ಮುಗಿದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯಲಿದ್ದು, ಆ ತಂಡದಲ್ಲಿ ತಮಗೂ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೆಹಾನೆ ಇದ್ದಾರೆ. ಆ ಭರವಸೆ ನಾನಿನ್ನೂ ಕಳೆದುಕೊಂಡಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ