ಐಪಿಎಲ್ 2023: ಮುಂಬೈ ಗೆಲುವಿಗೆ ತಾನೇ ನಿಂತ ರೋಹಿತ್ ಶರ್ಮಾ
ಮತ್ತೊಂದು ಕೊನೆಯ ಎಸೆತದ ಥ್ರಿಲ್ಲರ್ ಗೆಲುವು ಇದಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 19.4 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಯಿತು. ಡೇವಿಡ್ ವಾರ್ನರ್ 57, ಅಕ್ಸರ್ ಪಟೇಲ್ 54 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈಗೆ ಸ್ವತಃ ನಾಯಕ ರೋಹಿತ್ ಶರ್ಮಾ ಆಸರೆಯಾದರು. ಅವರು 45 ಎಸೆತ ಎದುರಿಸಿ 4 ಭರ್ಜರಿ ಸಿಕ್ಸರ್ ಗಳೊಂದಿಗೆ 65 ರನ್ ಸಿಡಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಇಶಾನ್ ಕಿಶನ್ 31, ತಿಲಕ್ ವರ್ಮ 41 ರನ್ ಗಳಿಸಿದರು. ಕ್ಯಾಮರೂನ್ ಗ್ರೀನ್ ಕೊನೆಯಲ್ಲಿ 8 ಎಸೆತಗಳಿಂದ 17 ರನ್ ಚಚ್ಚಿ ಮುಂಬೈ ಗೆಲುವು ಸುಲಭವಾಗಿಸಿದರು. ಇವರೆಲ್ಲರ ಸಾಹಸದಿಂದಾಗಿ ಮುಂಬೈ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು.