ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಅಲಸ್ಟೈರ್ ಕುಕ್: ಇಂಗ್ಲೆಂಡ್‌ಗೆ ಸರಣಿ ಜಯ

ಮಂಗಳವಾರ, 31 ಮೇ 2016 (11:42 IST)
ಅಲಸ್ಟೈರ್ ಕುಕ್ 10,000 ಟೆಸ್ಟ್ ರನ್ ಸ್ಕೋರ್ ಮಾಡಿದ ಪ್ರಥಮ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಇಂಗ್ಲೆಂಡ್ ತಂಡ ಸೋಮವಾರ ಎರಡನೇ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿ ಜಯ ಸಾಧಿಸಿದೆ.

9 ವಿಕೆಟ್‌ಗಳಿಂದ ಎರಡನೇ ಟೆಸ್ಟ್ ಪಂದ್ಯ ಗೆದ್ದಿರುವ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 2-0ಯಿಂದ ಗೆದ್ದಿದೆ.
 ಶ್ರೀಲಂಕಾವನ್ನು ಫಾಲೋ ಆನ್‌ಗೆ ದೂಡಿದ ಇಂಗ್ಲೆಂಡ್‌ಗೆ ಗೆಲ್ಲುವುದಕ್ಕೆ 79 ರನ್ ಬೇಕಾಗಿತ್ತು. ಇಂಗ್ಲೆಂಡ್ ಒಂದು ವಿಕೆಟ್ ಕಳೆದುಕೊಂಡು 80 ರನ್ ಮಾಡುವ ಮೂಲಕ ಎರಡನೇ ಟೆಸ್ಟ್ ಜಯಗಳಿಸಿತು. ಕುಕ್ 47 ನಾಟೌಟ್ ಮತ್ತು ನಿಕ್ ಕಾಂಪ್ಟನ್ ಅಜೇಯ 22 ರನ್‌ಗಳೊಂದಿಗೆ ಗೆಲುವಿನ ರನ್ ಸಿಡಿಸಿದರು.
 
 ಕುಕ್ ಇನ್ನಿಂಗ್ಸ್‌ನಲ್ಲಿ 10,000 ಟೆಸ್ಟ್ ರನ್ ಗಡಿಗೆ ಅಗತ್ಯವಿದ್ದ 5 ರನ್ ಸ್ಕೋರ್ ಮಾಡಿ 10000 ರನ್ ಗಡಿದಾಟಿದ ಸರ್ವಕಾಲಿಕ 12 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಹ ಓಪನರ್ ಅಲೆಕ್ಸ್ ಹೇಲ್ಸ್ ಅಜೇಯ 10 ರನ್ ಗಳಿಸಿದರು.
 
 31 ವರ್ಷ 157 ದಿನಗಳಲ್ಲಿ ಈ ಸಾಧನೆ ಮಾಡಿದ ಅತೀ ಕಿರಿಯ ಆಟಗಾರ ಎಂಬ ಹಿರಿಮೆಗೆ ಕುಕ್ ಪಾತ್ರರಾಗಿದ್ದು, ಸಚಿನ್ ತೆಂಡೂಲ್ಕರ್ ಅವರ 31 ವರ್, 326 ದಿನಗಳಲ್ಲಿ 10,000 ಗಡಿ ದಾಟಿದ ದಾಖಲೆಯನ್ನು ಮುರಿದಿದ್ದಾರೆ. 
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ 9 ವಿಕೆಟ್‌ಗೆ 498 ರನ್
ಮೊಯಿನ್ ಅಲಿ 155, ಜೋಯ್ ರೂಟ್ 80 ಮತ್ತು ಅಲೆಕ್ಸ್ ಹೇಲ್ಸ್ 83
ಶ್ರೀಲಂಕಾ ಪರ ನುವಾನ್ ಪ್ರದೀಪ್ 4 ವಿಕೆಟ್‌ಗಳು
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್
101ಕ್ಕೆ ಆಲೌಟ್ 
 ಸ್ಟುವರ್ಟ್ ಬ್ರಾಡ್ 4 ವಿಕೆಟ್, ಆಂಡರ್ ಸನ್ 3 ವಿಕೆಟ್, ಕ್ರಿಸ್ ವೋಕ್ಸ್ 3 ವಿಕೆಟ್
 ಶ್ರೀಲಂಕಾ ಎರಡನೇ ಇನ್ನಿಂಗ್ಸ್
475 ರನ್ 
ಚಾಂಡಿಮಾಲ್ 126, ಕೌಶಲ್ ಸಿಲ್ವ 60 ರನ್, ರಂಗನಾಥ್ ಹೆರಾಥ್ 61
ಇಂಗ್ಲೆಂಡ್ 2ನೇ ಇನ್ನಿಂಗ್ಸ್
1 ವಿಕೆಟ್‌ಗೆ 80 ರನ್, ಸರಣಿ ಜಯ

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

 

ವೆಬ್ದುನಿಯಾವನ್ನು ಓದಿ