ಅಮೀರ್ ನಮ್ಮ ಕುಟುಂಬದ ಭಾಗ, ನಾವು ಅವರನ್ನು ಬೆಂಬಲಿಸಿದ್ದೇವೆ: ವಾಹಬ್

ಸೋಮವಾರ, 11 ಜುಲೈ 2016 (19:38 IST)
ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯುವ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ, ಪಾಕಿಸ್ತಾನದ ವೇಗಿ ವಾಹಬ್ ರಿಯಾಜ್ ಸೋಮವಾರ ಕಳಂಕಿತ ಪೇಸರ್ ಮೊಹಮ್ಮದ್ ಅಮೀರ್ ಅವರನ್ನು ಬೆಂಬಲಿಸಿದ್ದಾರೆ. ಅಮೀರ್ ಅವರು ಸ್ಪಾಟ್ ಫಿಕ್ಸಿಂಗ್ ಅಪರಾಧವೆಸಗಿದ ಲಾರ್ಡ್ಸ್‌ ಮೈದಾನದಲ್ಲಿ ಆಡುತ್ತಿದ್ದು, ಮಿಷಬ್ ಉಲ್ ಹಕ್ ಸಾರಥ್ಯ ತಂಡ ಇಂಗ್ಲೆಂಡ್‌ನಲ್ಲಿ ಕಾಲಿರಿಸಿದಾಗಿನಿಂದಲೂ ಅಮೀರ್ ಚರ್ಚೆಯ ವಸ್ತುವಾಗಿದ್ದಾರೆ.  ಅಮೀರ್ ಪುನಃ ವಾಪಸಾಗಿರುವುದು ನಮಗೆ ಸಂತೋಷವಾಗಿದೆ. ಅವರು ಯಾವುದೇ ಎದುರಾಳಿಗೆ ಅಪಾಯಕಾರಿ ಬೌಲರ್ ಎಂದು ವಾಹಬ್ ಹೇಳಿದರು.
 
 ಅಮೀರ್‌ಗೆ ಬೆಂಬಲವಾಗಿ  ಎಲ್ಲರೂ ನಿಂತಿದ್ದೇವೆ. ಅವರು ನಮ್ಮ ಕುಟುಂಬದ ಭಾಗ. ಅವರು ದೇಶವನ್ನು ಪ್ರತಿನಿಧಿಸುವುದರಿಂದ ಅವರ ಹಿಂದಿದ್ದೇವೆ. ಅವರು ನಿಜವಾಗಲೂ ಚೆನ್ನಾಗಿ ಬೌಲಿಂಗ್ ಮಾಡಲು ನಾವು ಬೆಂಬಲಿಸುತ್ತೇವೆ ಎಂದು ವಾಹಬ್ ರಿಯಾಜ್ ಹೇಳಿದ್ದಾರೆ. 
 
 ಇಂಗ್ಲೀಷ್ ಬ್ಯಾಟಿಂಗ್ ಲೈನ್ ಅಪ್ ವಿರುದ್ಧ ಕೂಡ ವಾಹಬ್ ವಾಗ್ದಾಳಿ ಮಾಡಿ ಅದು ದುರ್ಬಲವಾಗಿದ್ದು, ಪಾಕಿಸ್ತಾನದ ಪ್ರಬಲ ಬೌಲಿಂಗ್ ಎದುರು ಧೂಳಿಪಟವಾಗುತ್ತದೆಂದು ಹೇಳಿದ್ದಾರೆ. 
 
ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್, ಜೋಯ್ ರೂಟ್ ಅವರನ್ನು ಹೊರತುಪಡಿಸಿ ಯುವ ಆಟಗಾರರಾದ ಗ್ಯಾರಿ ಬಾಲನ್ಸ್, ಜೇಮ್ಸ್ ವಿನ್ಸ್ ಮುಂತಾದವರು ಪಾಕಿಸ್ತಾನದ ಪ್ರಚಂಡ ಬೌಲಿಂಗ್ ದಾಳಿ ನಿಭಾಯಿಸುವುದು ಕಷ್ಟ ಎಂದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ