ಕೊಹ್ಲಿಯನ್ನ ಟ್ರಂಪ್`ಗೆ ಹೋಲಿಸಿದ ಆಸೀಸ್ ಮಾಧ್ಯಮಗಳಿಗೆ ಅಮಿತಾಬ್ ಬಚ್ಚನ್ ತಿರುಗೇಟು

ಬುಧವಾರ, 22 ಮಾರ್ಚ್ 2017 (12:45 IST)
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಾಂಗರೂಗಳಿಗೆ ತಕ್ಕ ಉತ್ತರ ನೀಡುತ್ತಿರುವ ಕೊಹ್ಲಿಯನ್ನ ಟೀಕಿಸುವುದೇ ಆಸೀಸ್ ಮಾಧ್ಯಮಗಳ ಕೆಲಸವಾಗಿಬಿಟ್ಟಿದೆ. ಒಂದಲ್ಲ ಒಂದು ವಿಷಯದಲ್ಲಿ ಕೊಹ್ಲಿಯನ್ನ ಕೆಣಕುವ ಆಸೀಸ್ ಮಾಧ್ಯಮಗಳಿಗೆ ಬಿಗ್ ಬಿ ಅಮಿತಾಬ್ ಬಚ್ಚನ್ ತಿರುಗೇಟು ನೀಡಿದ್ದಾರೆ.
 

ವಿರಾಟ್ ಕೊಹ್ಲಿ ಕ್ರೀಡೆಯ ಡೊನಾಲ್ಡ್ ಟ್ರಂಪ್ ಎಂದಿದ್ದ ಮಾಧ್ಯಮಗಳಿಗೆ ಚಾಣಾಕ್ಷ ರೀತಿಯಲ್ಲಿ ಉತ್ತರಿಸಿರುವ ಅಮಿತಾಬ್, ಕೊಹ್ಲಿಯನ್ನ ಒಬ್ಬ ವಿನ್ನರ್ ಮತ್ತು ಕ್ರೀಡೆಯ ಅಧ್ಯಕ್ಷನೆಂದು ಒಪ್ಪಿಕೊಂಡಿದ್ದಕ್ಕೆ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

ಲೇಖನದಲ್ಲಿ ಕೊಹ್ಲಿಯನ್ನ ಡೊನಾಲ್ಡ್ ಟ್ರಂಪ್`ಗೆ ಹೋಲಿಸಿದ್ದ ಆಸ್ಟ್ರೇಲಿಯಾ ದಿನಪತ್ರಿಕೆ ದಿ ಡೈಲಿ ಟೆಲಿಗ್ರಾಫ್, "Kohli has become the Donald Trump of world sport." ಎಂದು ಪ್ರಕಟಿಸಿತ್ತು. ಭಾರತೀಯ ನಾಯಕ ನಕಲಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದೂ ಬರೆಯಲಾಗಿತ್ತು.

ವೆಬ್ದುನಿಯಾವನ್ನು ಓದಿ