ಮ್ಯಾಥೀವ್ಸ್ ಆಲ್‌‍ರೌಂಡ್ ಪ್ರದರ್ಶನ: 2ನೇ ಏಕದಿನದಲ್ಲಿ ಶ್ರೀಲಂಕಾಗೆ ಜಯ

ಗುರುವಾರ, 25 ಆಗಸ್ಟ್ 2016 (11:31 IST)
ನಾಯಕ ಏಂಜಲೊ ಮ್ಯಾಥೀವ್ಸ್ ಬುಧವಾರ  ನೀಡಿದ ಆಲ್‌ರೌಂಡ್ ಪ್ರದರ್ಶನದ ಮೂಲಕ ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ 82 ರನ್ ವಿಜಯ ಗಳಿಸಿದೆ. ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 289 ರನ್ ಚೇಸ್ ಮಾಡಲು ವಿಫಲವಾಗಿ 47.2 ಓವರುಗಳಲ್ಲಿ 206‌ರನ್‌ಗೆ ಆಲೌಟ್ ಆಗಿ ಸೋಲಪ್ಪಿದೆ.
 
ಶ್ರೀಲಂಕಾದ ಎಡಗೈ ಸ್ಪಿನ್ನರ್ ಅಮಿಲಾ ಅಪೋನ್ಸೋ ನಾಲ್ಕು ವಿಕೆಟ್ ಕಬಳಿಸಿದರು ಮತ್ತು ಮದ್ಯಮ ವೇಗಿ ತಿಸಾರಾ ಪೆರಿರಾ 3 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ರನ್ ಚೇಸ್‌ಗೆ ಅಡ್ಡಿಯಾದರು.
 
 ಆದರೆ ಪಂದ್ಯಶ್ರೇಷ್ಟ ಮ್ಯಾಥೀವ್ಸ್ ಎರಡು ವಿಕೆಟ್ ಮತ್ತು ಬ್ಯಾಟಿಂಗ್‌ನಲ್ಲಿ 57 ರನ್‌ ನೆರವಿನಿಂದ ಶ್ರೀಲಂಕಾಗೆ ಆಸೀಸ್ ವಿರುದ್ಧ ರನ್‌ಗಳಿಗೆ ಸಂಬಂಧಿಸಿದಂತೆ ಅತೀ ದೊಡ್ಡ ಜಯವಾಗಿದೆ.2003ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 79 ರನ್ ಜಯವು  ಶ್ರೀಲಂಕಾದ ಹಿಂದಿನ ಶ್ರೇಷ್ಟ ಸ್ಕೋರ್ ಆಗಿತ್ತು.
 
 ಆಸೀಸ್ ಜೇಮ್ಸ್ ಫಾಕ್ನರ್ ಶ್ರೀಲಂಕಾ ವಿರುದ್ಧ ಮೊದಲ ಹ್ಯಾಟ್ರಿಕ್ ವಿಕೆಟ್ ಕಬಳಿಸಿದರೂ ಶ್ರೀಲಂಕಾ 48.5 ಓವರುಗಳಲ್ಲಿ 288 ರನ್ ಸ್ಕೋರ್ ಮಾಡಲು ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ