Anil Kumble: ತಮನ್ನಾಗೆ 6 ಕೋಟಿ, ಅರಣ್ಯ ಇಲಾಖೆ ರಾಯಭಾರಿ ಅನಿಲ್ ಕುಂಬ್ಳೆ ಸಂಭಾವನೆ ನಿಜಕ್ಕೂ ಶಾಕಿಂಗ್

Krishnaveni K

ಬುಧವಾರ, 28 ಮೇ 2025 (10:12 IST)
ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಗೆ ರಾಜ್ಯ ಸರ್ಕಾರ 6 ಕೋಟಿ ಕೊಟ್ಟು ಪರಭಾಷಾ ನಟಿ ತಮನ್ನಾ ಭಾಟಿಯಾರನ್ನು ರಾಯಭಾರಿಯಾಗಿ ನೇಮಕ ಮಾಡಿದೆ. ಆದರೆ ನಮ್ಮ ಅಪ್ಪಟ ಕನ್ನಡ ಪ್ರತಿಭೆ ಅನಿಲ್ ಕುಂಬ್ಳೆಯವರನ್ನು ಅರಣ್ಯ ಇಲಾಖೆ ರಾಯಭಾರಿಯಾಗಿ ನೇಮಕ ಮಾಡಲಾಗಿದ್ದು, ಅವರು ಪಡೆಯಲಿರುವ ಸಂಭಾವನೆ ವಿಚಾರ ತಿಳಿದ್ರೆ ಶಾಕ್ ಆಗ್ತೀರಿ.

ಕನ್ನಡಿಗ ಅನಿಲ್ ಕುಂಬ್ಳೆಗೆ ಮೊದಲಿನಿಂದಲೂ ಫೋಟೋಗ್ರಫಿ, ವನ್ಯಜೀವಿಗಳೆಂದರೆ ಆಸಕ್ತಿ. ಇದೀಗ ಹೆಮ್ಮೆಯ ಕ್ರಿಕೆಟಿಗನನ್ನು ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಇದು ಕನ್ನಡಿಗರಿಗೆ ತುಂಬಾ ಖುಷಿ ತಂದಿದೆ. ಇದರ ನಡುವೆ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರವೂ ಕೇಳಿಬಂದಿದೆ.

ಅನಿಲ್ ಕುಂಬ್ಳೆ ಈ ಕೆಲಸಕ್ಕೆ ಒಂದೇ ಒಂದು ರೂಪಾಯಿ ಸಂಭಾವನೆಯನ್ನೂ ತೆಗೆದುಕೊಳ್ಳುವುದಿಲ್ಲವಂತೆ. ಅನಿಲ್ ಕುಂಬ್ಳೆಗೆ ವನ್ಯಜೀವಿಗಳ ಬಗ್ಗೆ, ಅರಣ್ಯ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿಯಿದೆ. ಈ ಕಾರಣಕ್ಕೆ ಅವರು ಒಂದೇ ಒಂದು ರೂಪಾಯಿ ಸಂಭಾವನೆ ಪಡೆಯದೇ ಕೆಲಸ ಮಾಡಲು ಒಪ್ಪಿದ್ದಾರಂತೆ.

ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿರುವ ತಮನ್ನಾಗೆ 6 ಕೋಟಿ ಸಂಭಾವನೆ ನೀಡಲಾಗಿದೆ. ಈ ನಡುವೆ ನಮ್ಮದೇ ಕನ್ನಡ ಪ್ರತಿಭೆ ಅನಿಲ್ ಕುಂಬ್ಳೆ ಸಂಭಾವನೆಯಿಲ್ಲದೇ ಸೇವೆ ಮಾಡಲು ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ