ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

Krishnaveni K

ಶುಕ್ರವಾರ, 27 ಜೂನ್ 2025 (17:32 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಆತ್ಮಕತೆಯಲ್ಲಿ ಹಳೆಯ ದಿನದ ರೋಚಕ ವಿಚಾರವೊಂದನ್ನು ತೆರೆದಿಟ್ಟಿದ್ದಾರೆ. ರೋಹಿತ್ ಶರ್ಮಾ ಇದ್ದ ರೂಂಗೆ ತಮ್ಮ ಗರ್ಲ್ ಫ್ರೆಂಡ್ ಕರೆದೊಯ್ದ ಘಟನೆಯನ್ನು ವಿವರಿಸಿದ್ದಾರೆ.

ಆಗ ರೋಹಿತ್ ಮತ್ತು ಶಿಖರ್ ಭಾರತ ಎ ತಂಡದ ಪರ ಆಡುತ್ತಿದ್ದರು. ಶಿಖರ್  ಗೆ ಓರ್ವ ಗರ್ಲ್ ಫ್ರೆಂಡ್ ಇದ್ದಳು. ಆಕೆ ನೋಡಲು ತುಂಬಾ ಸುಂದರವಾಗಿದ್ದಳು. ಆಕೆಯನ್ನೇ ಮದುವೆಯಾಗಬೇಕೆಂದು ಶಿಖರ್ ಅಂದುಕೊಂಡಿದ್ದರಂತೆ. ಆದರೆ ಕೊನೆಗೆ ಅವರು ಬೇರೆಯಾದರು.

ಭಾರತ ಎ ತಂಡದ ಪರ ಆಸ್ಟ್ರೇಲಿಯಾ ವಿರುದ್ಧ ಆಡುವಾಗ ರೋಹಿತ್ ಮತ್ತು ಶಿಖರ್ ಗೆ ಒಂದೇ ರೂಂ ನೀಡಲಾಗಿತ್ತು. ಶಿಖರ್ ಯಾರಿಗೂ ಗೊತ್ತಾಗದ ಹಾಗೆ ಗರ್ಲ್ ಫ್ರೆಂಡ್ ನ್ನು ರೂಂಗೆ ಕರೆದುಕೊಂಡು ಬಂದಿದ್ದರು. ಇವರಿಬ್ಬರ ಕಾಟ ತಾಳಲಾರದೇ ರೋಹಿತ್ ಹಿಂದಿಯಲ್ಲಿ ‘ನನಗೆ ನಿದ್ರೆ ಮಾಡಲು ಬಿಡ್ತೀರಾ’ ಎಂದು ಬೈದಿದ್ದರಂತೆ.

ಕೊನೆಗೊಂದು ದಿನ ಹೋಟೆಲ್ ನ ಲಾಂಜ್ ನಲ್ಲಿ ಇಬ್ಬರೂ ಕೈ ಕೈ ಹಿಡಿದು ನಡೆದುಕೊಂಡು ಹೋಗುವಾಗ ಮ್ಯಾನೇಜರ್ ಕೈಗೆ ಸಿಕ್ಕಿಬಿದ್ದರಂತೆ. ಗರ್ಲ್ ಫ್ರೆಂಡ್ ನಿಂದಾಗಿ ಅವರಿಗೆ ಪಂದ್ಯಗಳಲ್ಲಿ ಏಕಾಗ್ರತೆಯೂ ಕಡಿಮೆಯಾಗಿತ್ತಂತೆ. ಇದನ್ನು ಅವರು ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ