ಚಾಂಪಿಯನ್ಸ್ ಟ್ರೋಫಿ ಬಳಿಕ ಕುಂಬ್ಳೆಗೆ ಗೇಟ್ ಪಾಸ್..?

ಗುರುವಾರ, 11 ಮೇ 2017 (17:35 IST)
ಟೀಮ್ ಇಂಡಿಯಾ ಹೆಡ್ ಕೋಚ್ ಯಶಸ್ವಿಯಾಗಿ ಒಂದು ವರ್ಷ ಕಳೆದಿರುವ ಅವನ ಅನಿಲ್ ಕುಂಬ್ಳೆ ಅವರ ಜೊತೆಗಿನ ಒಪ್ಪಂದವನ್ನ ಬಿಸಿಸಿಐ ಪರಿಶೀಲನೆ ನಡೆಸಲಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದರೂ ಅನಿಲ್ ಕುಂಬ್ಳೆ ಕೋಚ್ ಸ್ಥಾನದಲ್ಲಿ ಮುಂದುವರೆದರೂ ಡೌಟ್ ಎನ್ನುವ ರೀತಿ ವರದಿಗಳು ಬರುತ್ತಿವೆ.
 

ಅನಿಲ್ ಕುಂಬ್ಳೆ ಕೋಚ್ ಹೊಣೆ ಹೊತ್ತ ಬಳಿಕ ಭಾರತ ತಂಡ ಬಹುತೇಕ ಎಲ್ಲ ಸರಣಿಗಳನ್ನ ಗೆದ್ದಿದೆ. ಾದರೆ, ಅನಿಲ್ ಕುಂಬ್ಳೆ ನಡವಳಿಕೆ ಬಗ್ಗೆ ಬಿಸಿಸಿಐ ಬಿಗ್ ಬ಻ಸ್`ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಕೋಚ್ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಮುಂದುವರೆಸುವ ಕುರಿತಂತೆ ನಿರ್ಧಾರ ಕೈಗೊಳ್ಳುವಾಗ ಅವರ ನಡವಳಿಕೆಗಳನ್ನೂ ಸಹ ಪರಿಗಣಿಸಲಾಗುತ್ತದೆ. ಭಾರತ ಸರಣಿ ಗೆದ್ದರೂ ಕುಂಬ್ಳೆ ಮುಂದುವರಿಕೆ 50-50 ಮಾತ್ರ. ಕುಂಬ್ಳೆ ಬಿಸಿಸಿಐ ಪ್ರೋಟೋಕಾಲ್ ವಿರುದ್ಧವಾಗಿ ನಡೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಕೋಚ್ ಒಬ್ಬರಿಂದಲೇ ತಂಡ ಗೆಲುವು ಸಾಧಿಸುವುದಿಲ್ಲ. ಕೋಚ್ ಅಷ್ಟು ಮುಖ್ಯವಾಗುವುದಾದರೆ ಟ್ಯಾಲೆಂಟೆಡ್ ಆಟಗಾರರನ್ನ ನಾವ್ಯಾಕೆ ಹುಡುಕಬೇಕು ಎನ್ನುವ ಮೂಲಕ ಕುಂಬ್ಳೆ ಮೇಲಿನ ಅಸಮಾಧಾನವನ್ನ ಹೊರಹಾಕಿದ್ದಾರೆ. ಅನಿಲ್ ಕುಂಬ್ಳೆ ಬಿಸಿಸಿಐ ಅನ್ನ ಓವರ್ ಟೇಕ್ ಮಾಡಿ ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತ ಸಮಿತಿ ಸದಸ್ಯರನ್ನ ಭೇಟಿಯಾಗುತ್ತಿರುವುದು ಈ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
.
:ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ