ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದ ಅನಿಲ್ ಕುಂಬ್ಳೆ: ವರದಿ

ಮಂಗಳವಾರ, 20 ಜೂನ್ 2017 (20:16 IST)
ಚಾಂಪಿಯನ್ಸ್ ಟ್ರೋಫಿ ಫೈನಲ್`ನಲ್ಲಿ ಭಾರತ ತಂಡ ಹೀನಾಯ ಸೋಲು ಮತ್ತು ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಮನಸ್ತಾಪದ ಬಳಿಕ ಜರ್ಜರಿತರಾಗಿರುವ ಟೀಮ್ ಇಂಡಿಯಾ ಹೆಡ್ ಕೋಚ್ ಅನಿಲ್ ಕುಂಬ್ಳೆ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಎಎನ್`ಐ ವರದಿ ಮಾಡಿದೆ. ಈ ವರದಿಗಳು ನಿಜವಾದರೆ 5 ಏಕದಿನ ಪಂದ್ಯ ಮತ್ತು ಏಕೈಕ ಟಿ-20 ಪಂದ್ಯವನ್ನೊಳಗೊಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅನಿಲ್ ಕುಂಬ್ಳೆ ತಂಡದ ಜೊತೆ ತೆರಳುವುದಿಲ್ಲ.

ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಒಂದು ವರ್ಷದ ಮಟ್ಟಿಗೆ ತಂಡದ ಕೋಚ್ ಆಗಿ ುವರೆಯುವಂತೆ ಅನಿಲ್ ಕುಂಬ್ಳೆ ಸುಪ್ರೀಂಕೋರ್ಟ್ ನೇಮಿಸರುವ ಆಡಳಿತ ಮಂಡಳಿ ಅಧ್ಯಕ್ಷ ವಿನೋದ್ ರಾಯ್ ಸೂಚಿಸಿದ್ದರು. ಜೊತೆಗೆ ಮುಂದಿನ ಕೋಚ್ ಆಯ್ಕೆಯಲ್ಲೂ ಕುಂಬ್ಳೆ ಹೆಸರು ಮುಂಚೂಣಿಯಲ್ಲಿದ್ದರೂ ಸಹ ಅವರು ಕೋಚ್ ಸ್ಥಾನದಲ್ಲಿ ಮುಂದುವರೆಯದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇವತ್ತಿಗೆ ಬಿಸಿಸಿಐ ಜೊತೆ ಅನಿಲ್ ಕುಂಬ್ಳೆ ಮಾಡಿಕೊಂಡಿದ್ದ ಒಪ್ಪಂದ ಮುಗಿಯುತ್ತಿದ್ದು, ಮರು ಒಪ್ಪಂದ ಮಾಡಿಕೊಳ್ಳದಿರಲು ಕುಂಬ್ಳೆ ನಿರ್ಧರಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.  ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ನಡುವಿನ ಮನಸ್ತಾಪ ಸರಪಡಿಸಲಾಗದಷ್ಟರ ಮಟ್ಟಿಗೆ ಹದಗೆಟ್ಟಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ