ಅಭಿನಂದಿಸಲು ಸಿರಾಜ್‌ನನ್ನೇ ಕೈಬಿಟ್ಟ ಜಯ್‌ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ

Sampriya

ಸೋಮವಾರ, 7 ಜುಲೈ 2025 (16:48 IST)
Photo Credit X
ಮುಂಬೈ: ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತದ ಐತಿಹಾಸಿಕ ಗೆಲುವನ್ನು ಉಲ್ಲೇಖಿಸಿ, ಭಾರತ ತಂಡವನ್ನು ಅಭಿನಂದಿಸಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಜಯ್ ಶಾ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಪೋಸ್ಟ್ ಇದೀಗ ವಿವಾದಕ್ಕೆ ಸಿಲುಕಿದೆ.

ಇದಕ್ಕೆ ಕಾರಣ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹೆಸರನ್ನು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಭಾರತದ ನಾಯಕ ಶುಭಮನ್ ಗಿಲ್, ವೇಗಿ ಆಕಾಶ್ ದೀಪ್, ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ ಹೆಸರನ್ನು ಪೋಸ್ಟ್‌ನಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಎರಡನೇ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಸೇರಿದಂತೆ ಏಳು ವಿಕೆಟ್ ಪಡೆದ ಸಿರಾಜ್ ಹೆಸರನ್ನು ಜಯ್ ಶಾ ಅವರು ಉಲ್ಲೇಖಿಸಿಲ್ಲ.

ಹಲವು ಮಂದಿ ಜಯ್‌ ಶಾ ಅವರ ಪೋಸ್ಟ್‌ಗೆ ಅಸಮಾಧಾನ ಹೊರಹಾಕಿದ್ದಾರೆ.  ಸಿರಾಜ್ ಮುಸ್ಲಿಂ ಎಂಬ ಕಾರಣಕ್ಕೆ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಅಭಿಮಾನಿಯೊಬ್ಬರು ಟೀಕಿಸಿದ್ದಾರೆ.

ಇದು ಎಜ್‌ಬಾಸ್ಟನ್‌ನಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಗೆಲುವು. ಇದರೊಂದಿಗೆ ಪ್ರವಾಸಿ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಗಿಲ್ ನಾಯಕತ್ವ ವಹಿಸಿಕೊಂಡ ನಂತರ ಭಾರತಕ್ಕೆ ಇದು ಮೊದಲ ಗೆಲುವು. ಮೂರನೇ ಟೆಸ್ಟ್ ಜುಲೈ 10 ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ