ಶ್ರೀಲಂಕಾ ಆಟಗಾರರ ಜತೆ ಮಾತಿನ ಚಕಮಕಿಗೆ ಇಳಿದ ಇಶಾಂತ್ ಶರ್ಮಾ

ಸೋಮವಾರ, 31 ಆಗಸ್ಟ್ 2015 (17:59 IST)
ಭಾರತ ತಂಡದ ವೇಗಿ ಇಶಾಂತ್ ಶರ್ಮಾ ನಾಲ್ಕನೆ ದಿನದಂದು  ಕೆಲವು ಶ್ರೀಲಂಕಾ ಆಟಗಾರರ ಜತೆ ಮಾತಿನ ಚಕಮಕಿಗೆ ಇಳಿದ ಘಟನೆ ಸಂಭವಿಸಿದೆ. ಭಾರತದ ಎರಡನೇ ಇನ್ನಿಂಗ್ಸ್‌ನ 76ನೇ ಓವರಿನಲ್ಲಿ ಧಾಮ್ಮಿಕಾ ಪ್ರಸಾದ್ ಬೌಲಿಂಗ್‌ನಲ್ಲಿ ಈ ಘಟನೆ ನಡೆಯಿತು. ಪ್ರಸಾದ್ ಕೆಲವು ಬೌನ್ಸರುಗಳನ್ನು ಇಶಾಂತ್ ಅವರತ್ತ ಎಸೆದರು. ಪ್ರಸಾದ್ ಎಸೆದ ಮೂರನೇ ಬೌನ್ಸರ್‌ಗೆ ಅಂಪೈರ್ ನೋ ಬಾಲ್ ಘೋಷಿಸಿದರು. 
 
ಓವರಿಗೆ ಎರಡು ಬೌನ್ಸರ್ ಕೋಟಾ ಮುಗಿದು ಎಸೆದ ಇನ್ನೊಂದು ಬೌನ್ಸರ್‌ಗೆ ಪ್ರಸಾದ್ ಪಾಯಿಂಟ್ ರೀಜನ್‌ಗೆ ಸಿಂಗಲ್ ಹೊಡೆದರು. ಆದರೆ ಪ್ರಸಾದ್ ಅವರತ್ತ ಓಡುವಾಗ ತಮ್ಮ ಹೆಲ್ಮೆಟ್ ತಟ್ಟುತ್ತಾ ತಮ್ಮ ತಲೆಗೆ ಹೊಡೆಯಲು ಪ್ರಯತ್ನಿಸುವಂತೆ ಪ್ರಸಾದ್‌ಗೆ ಸಂಜ್ಞೆ ಮಾಡಿದರು. ರನ್ ಪೂರ್ಣಗೊಂಡ ನಂತರ ಪ್ರಸಾದ್ ಇಶಾಂತ್ ಅವರಿಗೆ ಕೆಲವು ಮಾತುಗಳನ್ನು ಹೇಳಿದರು. ಆದರೆ ಇಶಾಂತ್ ಸಹನೆ ಕಳೆದುಕೊಂಡು ಕೋಪದಿಂದ ಮಾತಿನ ಚಕಮಕಿಗೆ ಇಳಿದರು.

 ಅಷ್ಟರಲ್ಲಿ ದಿನೇಶ್ ಚಾಂಡಿಮಾಲ್ ತಮ್ಮ ಕೆಲವು ಪದಗಳನ್ನು ಹರಿಬಿಟ್ಟರು. ಇದು ರವಿಚಂದ್ರನ್ ಅಶ್ವಿನ್ ಅವರಿಗೆ ಸರಿಕಾಣಿಸದೇ ಅಂಪೈರ್‌ಗಳಾದ ರಾಡ್  ಟಕರ್ ಮತ್ತು ನೈಜೆಲ್ ಲಾಂಗ್ ಅವರ ಗಮನಸೆಳೆದರು. ಅವರು ಮ್ಯಾಥೀವ್ಸ್ ಅವರನ್ನು ಕರೆಸಿ ಅವರ ಆಟಗಾರರಿಗೆ ಶಾಂತವಾಗಿರಲು ಹೇಳುವಂತೆ ತಿಳಿಸಿದರು. 
 
ಈ ಘಟನೆ ಬಳಿಕ ಇನ್ನಷ್ಟು ಕೋಪಗೊಂಡಿದ್ದ ಪ್ರಸಾದ್ ಉದ್ದೇಶಪೂರ್ವಕವಾಗಿ ಇಶಾಂತ್ ಕಡೆಗೆ ನಾಲ್ಕನೇ ಬೌನ್ಸರ್ ಹಾಕಿದಾಗ ಅದಕ್ಕೆ ಇಶಾಂತ್ ಸಿಂಗಲ್ಸ್ ಓಡಿದರು.  ಓವರಿನ ಅಂತಿಮ ಎಸೆತದಲ್ಲಿ ಪ್ರಸಾದ್ ಅಶ್ವಿನ್ ಅವರನ್ನು ಔಟ್ ತೆಗೆದರು. ಇಶಾಂತ್ ಪೆವಿಲಿಯನ್‌ನತ್ತ ತೆರಳುವಾಗ ಪ್ರಸಾದ್ ಅವರತ್ತ ಓಡಿ ಕೆಲವು ಮಾತುಗಳನ್ನು ಹೇಳಿದರು.  ಭಾನುವಾರ ಇಶಾಂತ್ ಅವರು ಕುಸಾಲ್ ಪೆರೀರಾ ಮತ್ತು ರಂಗನಾಥ್ ಹೇರಾತ್ ಜತೆ ವಾಗ್ವಾದಕ್ಕೆ ಇಳಿದಿದ್ದರು. 

ವೆಬ್ದುನಿಯಾವನ್ನು ಓದಿ