ವೃತ್ತಿ ಜೀವನದ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದು ಸ್ಟುವರ್ಟ್ ಬ್ರಾಡ್ ವಿದಾಯ: ಆಶಸ್ ಸರಣಿ ಸಮಬಲ

ಮಂಗಳವಾರ, 1 ಆಗಸ್ಟ್ 2023 (09:13 IST)
ಲಂಡನ್: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿ 2-2 ರಿಂದ ಸಮಬಲಗೊಂಡು ಮುಕ್ತಾಯವಾಗಿದೆ. ಕೊನೆಯ ಪಂದ್ಯವನ್ನು ಇಂಗ್ಲೆಂಡ್ 49 ರನ್ ಗಳಿಂದ ಗೆದ್ದುಕೊಂಡಿದೆ.

ಇದು ಇಂಗ್ಲೆಂಡ್ ನ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಗೆ ಕೊನೆಯ ಪಂದ್ಯವಾಗಿತ್ತು. ವಿಶೇಷವೆಂದರೆ ವೃತ್ತಿ ಜೀವನದ ಕೊನೆಯ ಎಸೆತದಲ್ಲಿ  ವಿಕೆಟ್ ಪಡೆಯುವ ಮೂಲಕ ಬ್ರಾಡ್ ತಮ್ಮ ತಂಡಕ್ಕೆ ಗೆಲುವು ಕೊಡಿಸಿ ಗೌರವಯುತ ವಿದಾಯ ಹೇಳಿದ್ದಾರೆ. ಈ ಪಂದ್ಯದಲ್ಲಿ ಅವರು ಬ್ಯಾಟಿಂಗ್ ನಲ್ಲೂ ತಮ್ಮ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 283 ಮತ್ತು ಆಸೀಸ್ 295 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 395 ರನ್ ಗಳಿಸಿದ್ದರೆ ಆಸೀಸ್ 334 ಕ್ಕೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ. ಇದರೊಂದಿಗೆ ಈ ಬಾರಿಯ ಆಶಸ್ ಸರಣಿ ಡ್ರಾನಲ್ಲಿ ಅಂತ್ಯಗೊಂಡಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ