ಟಿ 20 ಮೂರನೇ ಪಂದ್ಯದಲ್ಲಿ ಅಶ್ವಿನ್ ಮ್ಯಾಜಿಕ್ : ಭಾರತಕ್ಕೆ ಸರಣಿ ಜಯ

ಸೋಮವಾರ, 15 ಫೆಬ್ರವರಿ 2016 (14:23 IST)
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ನಾಲ್ಕು ವಿಕೆಟ್‌ಗಳ ಅತ್ಯುತ್ತಮ ಶ್ರೇಷ್ಠ ಬೌಲಿಂಗ್ ಸಾಧನೆ ಮತ್ತು ಶಿಖರ್ ಧವನ್ ಅವರ ಅಜೇಯ 46 ರನ್ ನೆರವಿನಿಂದ ಭಾರತ ಶ್ರೀಲಂಕಾ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ  ಮೂರು ಪಂದ್ಯಗಳ ಸರಣಿಯಲ್ಲಿ 2-1ರಿಂದ ಗೆದ್ದಿದೆ. ಅಶ್ವಿನ್ ತಮ್ಮ ಮೊದಲ ಓವರಿನಲ್ಲೇ ಎರಡು ವಿಕೆಟ್ ಕಬಳಿಸುವ ಮೂಲಕ ತಮ್ಮ ಸ್ಪಿನ್ ಕೈಚಳಕ ತೋರಿಸಿದರು.

ಮರು ಓವರಿನಲ್ಲಿ ಲಂಕಾದ ಇನ್ನೊಂದು ವಿಕೆಟ್ ಪಡೆದರು. ದಿನೇಶ್ ಚಾಂಡಿಮಾಲ್ ಔಟಾದ ಬಳಿಕ ತಂಡ ಕುಸಿತದ ಹಾದಿ ಹಿಡಿದು ಅತೀ ಕಡಿಮೆ ಸ್ಕೋರಾದ 82  ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
 
 ಭಾರತ ಬ್ಯಾಟಿಂಗ್ ಆರಂಭಿಸಿ ಆರಂಭದಲ್ಲೇ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡರೂ 13.5 ಓವರುಗಳಲ್ಲಿ ಗುರಿಯನ್ನು ಮುಟ್ಟಿತು. ಓಪನರ್ ಶಿಖರ್ ಧವನ್ (46) ಮತ್ತು ಅಜಿಂಕ್ಯಾ ರಹಾನೆ(22) ಅಜೇಯ 55 ರನ್ ಜತೆಯಾಟ ನೆರವಿನಿಂದ ಗೆಲುವಿನ ಗುರಿಯನ್ನು ಸುಲಭವಾಗಿ ಮುಟ್ಟಿದರು. 
 

ವೆಬ್ದುನಿಯಾವನ್ನು ಓದಿ