ಟೆಸ್ಟ್ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನ ಪಡೆದ ರವಿಚಂದ್ರನ್ ಅಶ್ವಿನ್

ಬುಧವಾರ, 12 ಅಕ್ಟೋಬರ್ 2016 (14:39 IST)
ಭಾರತ- ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 140 ರನ್ ನೀಡಿ 13 ವಿಕೆಟ್ ಕಬಳಿಸಿದ ಭಾರತೀಯ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಐಸಿಸಿ ಬೌಲರ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.  
ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಟ್ಟು 27 ವಿಕೆಟ್‌ಗಳನ್ನು ಕಬಳಿಸಿದ ಅಶ್ವಿನ್, ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 39 ಟೆಸ್ಟ್ ಪಂದ್ಯಗಳಲ್ಲಿ 220 ವಿಕೆಟ್ ಕಬಳಿಸಿದ್ದಾರೆ. 
 
ಇಂದೋರ್‌ನಲ್ಲಿ ಪಂದ್ಯ ನಡೆಯುವುದಕ್ಕಿಂತ ಮುಂಚೆ ಐಸಿಸಿ ಬೌಲರ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನ ಪಡೆದಿದ್ದು, ಇದೀಗ ಮತ್ತೆ ಅಗ್ರಸ್ಥಾನ ಪಡೆದಿದ್ದಾರೆ. ಟೀಂ ಇಂಡಿಯಾ ತಂಡ ಕೂಡಾ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದೆ. 
 
ಮುತ್ತಯ್ಯ ಮುರಳಿಧರನ್, ಗ್ಲೆನ್ ಮ್ಯಾಕ್ ಗ್ರೆಥ್, ವೆರ್ನೋನ್ ಫಿಲಾಂಡರ್, ದಲೇ ಸ್ಟೇನ್ ಮತ್ತು ಶೌನ್ ಪೌಲಕ್‌ ನಂತರದ ಸ್ಥಾನವನ್ನು ಅಶ್ವಿನ ಪಡೆದಿದ್ದಾರೆ. 
 
ಬ್ಯಾಟ್ಸ್‌ಮೆನ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ತಂಡದ ಅಜಿಂಕ್ಯ ರೆಹಾನೆ ಬಡ್ತಿ ಪಡೆದು ಆರನೇ ಸ್ಥಾನಕ್ಕೆ ತಲುಪಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ