ಅಶ್ವಿನ್ ಮಾರಕ ಸ್ಪಿನ್ ದಾಳಿ: ಭಾರತಕ್ಕೆ ದ.ಆಫ್ರಿಕಾ ವಿರುದ್ಧ 124 ರನ್ ಜಯ

ಶುಕ್ರವಾರ, 27 ನವೆಂಬರ್ 2015 (15:55 IST)
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕಾನ್ಪುರದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದ್ದು, 4 ಟೆಸ್ಟ್ ಸರಣಿಯನ್ನು 2-0ಯಿಂದ ತನ್ನ ಮಡಿಲಿಗೆ ಹಾಕಿಕೊಂಡಿದೆ.  ದಕ್ಷಿಣ ಆಫ್ರಿಕಾವನ್ನು 185 ರನ್‌ಗೆ ಆಲೌಟ್ ಮಾಡಿದ ಭಾರತ 124 ರನ್ ಭರ್ಜರಿ ಜಯ ಗಳಿಸಿದೆ. ಭಾರತದ ಬೌಲರುಗಳು ಮತ್ತೆ ಸ್ಪಿನ್ ಕೈಚಳಕವನ್ನು ತೋರಿದ್ದು, ರವಿಚಂದ್ರನ್ ಅಶ್ವಿನ್ ಅವರ ಮಾರಕ ಸ್ಪಿನ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ  ಆಟಗಾರರು ಪೆವಿಲಿಯನ್‌ಗೆ ಮಾರ್ಚ್ ಫಾಸ್ಟ್ ಮಾಡಿದರು. 
 
 
ರವಿಚಂದ್ರನ್ ಅಶ್ವಿನ್ ಅವರು 66 ರನ್ ನೀಡಿ 7 ವಿಕೆಟ್ ಕಬಳಿಸಿದರು. ಮೂರನೇ ದಿನ ಗೆಲ್ಲುವುದಕ್ಕೆ ಭಾರತಕ್ಕೆ 8 ವಿಕೆಟ್‌ಗಳ ಅಗತ್ಯವಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಿಸಿದರು.  ಹಶೀಮ್ ಆಮ್ಲಾ ಮತ್ತು ಡು ಫಾಫ್ ಡು ಪ್ಲೆಸಿಸ್ ಅವರನ್ನು ಹೊರತುಪಡಿಸಿ ಯಾವ ಬ್ಯಾಟ್ಸ್‌ಮನ್‌ಗಳೂ ಭಾರತದ ಸ್ಪಿನ್ನರುಗಳಿಗೆ ಸವಾಲನ್ನು ಒಡ್ಡದೇ ಶರಣಾದರು.  ಅಮಿತ್ ಮಿಶ್ರಾ  ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು 39 ರನ್‌ಗೆ ಔಟ್ ಮಾಡಿದರು.

ದಕ್ಷಿಣ ಆಫ್ರಿಕಾ ಸೋಲಿನಿಂದಾಗಿ ವಿದೇಶದಲ್ಲಿ ಸತತ 9 ವರ್ಷಗಳ ಅಜೇಯ ಸರಣಿ ಗೆಲುವಿಗೆ ತೆರೆ ಬಿದ್ದಿದೆ.ಅಶ್ವಿನ್ ಅವರು  ಟೆಸ್ಟ್‌ನಲ್ಲಿ ಒಟ್ಟು 10 ವಿಕೆಟ್ ಕಬಳಿಸಿದ ಗೌರವಕ್ಕೆ ಇನ್ನೊಮ್ಮೆ ಪಾತ್ರರಾದರು.  ಇದರಿಂದ 2015ರಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಡ್ ಬ್ರಾಡ್ ಅವರನ್ನು ಹಿಂದಿಕ್ಕಿ  ಅತೀ ಹೆಚ್ಚು ಟೆಸ್ಟ್ ವಿಕೆಟ್ ಕಬಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾಗೆ ಒಂದು ವಿಕೆಟ್ಟೂ ಸಿಕ್ಕಿಲ್ಲ. ಅಮಿತ್ ಮಿಶ್ರಾ 51 ರನ್ ನೀಡಿ 3 ವಿಕೆಟ್ ಕಬಳಿಸಿದರು.  ಇದು ವಿರಾಟ್ ಕೊಹ್ಲಿ ಅವರ ಮೊಟ್ಟಮೊದಲ ತವರು ಟೆಸ್ಟ್ ಸರಣಿ ಜಯವಾಗಿದೆ. 
 

ವೆಬ್ದುನಿಯಾವನ್ನು ಓದಿ