ಇಂದಿನಿಂದ ಮಹಿಳಾ ಕ್ರಿಕೆಟ್ ತಾರೆಯರ ಟಿ20 ಏಷ್ಯಾಕಪ್: ಭಾರತಕ್ಕೆ ಇಂದು ಪಾಕಿಸ್ತಾನ ಎದುರಾಳಿ

Krishnaveni K

ಶುಕ್ರವಾರ, 19 ಜುಲೈ 2024 (11:23 IST)
Photo Credit: Facebook
ದಂಬುಲಾ: ಇಂದಿನಿಂದ ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು, ಈ ಬಾರಿಯೂ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತವೇ ಗೆಲ್ಲುವ ಫೇವರಿಟ್ ತಂಡವಾಗಿದೆ.

ಮಹಿಳೆಯರ 9 ನೇ ಏಷ್ಯಾ ಕಪ್ ಟೂರ್ನಿ ಶ್ರೀಲಂಕಾದ ದಂಬುಲಾ ಮೈದಾನದಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳೂ ಒಂದೇ ಮೈದಾನದಲ್ಲಿ ನಡೆಯಲಿದೆ. ಒಟ್ಟು ಎಂಟು ತಂಡಗಳು ಆಡುತ್ತಿವೆ. ಎರಡು ಗುಂಪುಗಳಾಗಿ ಮಾಡಲಾಗಿದ್ದು ಈ ಪೈಕಿ ಭಾರತ ಪಾಕಿಸ್ತಾನ, ನೇಪಾಳ, ಯುಎಇ ಜೊತೆಗೆ ಎ ಗುಂಪಿನಲ್ಲಿದೆ.

ಇಂದು ಉದ್ಘಾಟನಾ ಪಂದ್ಯದಲ್ಲಿ ನೇಪಾಳ ಮತ್ತು ಯುಎಇ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಭಾರತ ಮೊದಲ ಪಂದ್ಯವನ್ನು ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದೆ.

ಭಾರತ ಇದುವರೆಗೆ ಮಹಿಳೆಯರ ಏಷ್ಯಾ ಕಪ್ ನಲ್ಲಿ ಏಳು ಬಾರಿ ಚಾಂಪಿಯನ್ ಆಗಿ ದಾಖಲೆ ಮಾಡಿದೆ. ಈ ಬಾರಿಯೂ ಭಾರತವೇ ಬಲಿಷ್ಠ ತಂಡವಾಗಿದೆ. ಸ್ಮೃತಿ ಮಂಧಾನ, ರಿಚಾ ಘೋಷ್, ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ನಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದರೆ ಬೌಲಿಂಗ್ ನಲ್ಲಿ ಪೂಜಾ ವಸ್ತ್ರಾಕರ್, ರಾಧಾ ಯಾದವ್, ದೀಪ್ತಿ ಶರ್ಮಾರಂತಹ ಉತ್ತಮ ಬೌಲರ್ ಗಳ ಬಲವಿದೆ. ಎಲ್ಲಾ ಪಂದ್ಯಗಳ ನೇರಪ್ರಸಾರ ಸ್ಟಾರ್ ಸ್ಪೋರ್ಟ್ ವಾಹಿನಿ ಅಥವಾ ಡಿಸ್ನಿ ಹಾಟ್ ಸ್ಟಾರ್ ಆಪ್ ನಲ್ಲಿ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ