IND vs ENG:ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಟಾಸ್ ಸೋಲುವುದರಲ್ಲೇ ದಾಖಲೆ

Krishnaveni K

ಗುರುವಾರ, 31 ಜುಲೈ 2025 (15:19 IST)

ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲೂ ಟಾಸ್ ಸೋಲುವುದರೊಂದಿಗೆ ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ದಾಖಲೆಯನ್ನೇ ಮಾಡಿದ್ದಾರೆ.

ಈ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಗಿಲ್ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ಆದರೆ ಈ ಐದೂ ಟೆಸ್ಟ್ ಪಂದ್ಯಗಳಲ್ಲಿ ಅವರು ಒಮ್ಮೆಯೂ ಟಾಸ್ ಗೆದ್ದಿಲ್ಲ. ಸತತ ಐದನೇ ಬಾರಿಗೂ ಇಂಗ್ಲೆಂಡ್ ನಾಯಕನೇ ಟಾಸ್ ಗೆದ್ದಿದ್ದಾರೆ. ಗಿಲ್ ಮಾತ್ರವಲ್ಲ, ಭಾರತ ತಂಡವೂ ಸತತ 15 ನೇ ಬಾರಿಗೆ ಟಾಸ್ ಸೋತು ದಾಖಲೆ ಮಾಡಿದೆ.

ಇಂದು ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಭಾರತ ತಂಡ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಗಮನಿಸಬೇಕಾದ ಅಂಶವೆಂದರೆ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಅವರ ಬದಲು ಆಕಾಶ್ ದೀಪ್ ಬಂದಿದ್ದಾರೆ.

ಇನ್ನು, ಶ್ರಾದ್ಧೂಲ್ ಠಾಕೂರ್ ಬದಲಿಗೆ ಪ್ರಸಿದ್ಧ ಕೃಷ್ಣ, ರಿಷಭ್ ಪಂತ್ ಬದಲಿಗೆ ಧ್ರುವ ಜ್ಯುರೆಲ್, ಕರುಣ್ ನಾಯರ್ ಗೆ ಅವಕಾಶ ನೀಡಲಾಗಿದೆ. ವಿಶೇಷವೆಂದರೆ ಮೂರನೇ ಪಂದ್ಯದಲ್ಲಿ ವಿಫಲರಾದ ಬಳಿಕ ಕರುಣ್ ನಾಯರ್ ಗೆ ಅದೇ ಕೊನೆಯ ಪಂದ್ಯವೆಂದು ಹೇಳಲಾಗಿತ್ತು. ಆದರೆ ಅವರಿಗೆ ಇನ್ನೊಂದು ಅವಕಾಶ ನೀಡಲು ಮ್ಯಾನೇಜ್ ಮೆಂಟ್ ತೀರ್ಮಾನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ