ನ್ಯೂಜಿಲೆಂಡ್‌ನ ಬೌಲ್ಟ್ ಮಾರಕ ದಾಳಿಗೆ ಆಸ್ಟ್ರೇಲಿಯಾ 151ಕ್ಕೆ ಬೌಲ್ಡ್

ಶನಿವಾರ, 28 ಫೆಬ್ರವರಿ 2015 (10:37 IST)
ಆಕ್ಲೆಂಡ್: ವಿಶ್ವಕಪ್ ಪಂದ್ಯಾವಳಿಯ ಎರಡು ದೈತ್ಯ ತಂಡಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಆಕ್ಲೆಂಡ್‌ನ ಎಡನ್‌ಪಾರ್ಕ್‌ನಲ್ಲಿ ನಡೆಯುತ್ತಿರುವ ಪೂಲ್ ಎನ 20ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಮಾರಕ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಧೂಳೀಪಟವಾಗಿದ್ದು, ಕೇವಲ 151 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ.

ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ  ಆಸ್ಟ್ರೇಲಿಯಾ  ತನ್ನ ಪೂರ್ಣ 50 ಓವರುಗಳನ್ನು ಆಡಲು ವಿಫಲವಾಗಿ 32. 2 ಓವರುಗಳಲ್ಲೇ ಆಲೌಟ್ ಆಗಿದೆ. ಟಿಮ್ ಸೌತೀ ಮತ್ತು ಡೇನಿಯಲ್ ವಿಟ್ಟೋರಿ ತಲಾ 2 ವಿಕೆಟ್ ಕಬಳಿಸಿದರು.  ಆಂಡರ್‌ಸನ್ ಒಂದು ವಿಕೆಟ್ ಪಡೆದರು. ಆಸ್ಟ್ರೇಲಿಯಾ ಪರ ಆರಾನ್ ಫಿಂಚ್ 14 ರನ್, ಡೇವಿಡ್ ವಾರ್ನರ್ 42 ಎಸೆತಗಳಲ್ಲಿ 34 ರನ್, ಶೇನ್ ವಾಟ್ಸನ್ 30 ಎಸೆತಗಳಲ್ಲಿ 23 ರನ್,  ಬ್ರಾಡ್ ಹ್ಯಾಡಿನ್ 41 ಎಸೆತಗಳಲ್ಲಿ 43 ರನ್ ಗಳಿಸಿದರು.

ಆರಂಭದಲ್ಲಿ ಆಸ್ಟ್ರೇಲಿಯಾ ಪರ ವಿಕೆಟ್‌ಗಳು ಒಂದಾದ ಮೇಲೊಂದು ಪತನವಾದವು. ಬೌಲ್ಟ್ ಅವರ ಮಾರಕ ವೇಗದ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾದ ಮೂವರು ಆಟಗಾರರಾದ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್ ಮತ್ತು ಮಿಚೆಲ್ ಸ್ಟಾರ್ಕ್ ಬೌಲ್ಡ್ ಔಟ್ ಆದರು. ನ್ಯೂಜಿಲೆಂಡ್ 8.1 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 79 ರನ್ ಗಳಿಸಿದ್ದು, ಗೆಲುವಿಗೆ ಸನಿಹದಲ್ಲಿದೆ. 

ವೆಬ್ದುನಿಯಾವನ್ನು ಓದಿ