2ನೇ ಟೆಸ್ಟ್‌ನಲ್ಲೂ ಶ್ರೀಲಂಕಾ ವಿರುದ್ಧ ಸೋಲಿನ ಸುಳಿಯಲ್ಲಿ ಆಸ್ಟ್ರೇಲಿಯಾ

ಶುಕ್ರವಾರ, 5 ಆಗಸ್ಟ್ 2016 (18:01 IST)
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸೋಲಿನ ಸುಳಿಯಲ್ಲಿ ಸಿಕ್ಕಿಬಿದ್ದಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ  25 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ರಂಗನಾ ಹೆರಾತ್ ಮತ್ತು ಪೆರೇರಾ ಅವರ ಮಾರಕ ಬೌಲಿಂಗ್ ದಾಳಿಯಿಂದ ಕೇವಲ 106 ರನ್‌ಗಳಿಗೆ ಕುಸಿದುಬಿದ್ದಿತ್ತು. ಹೇರಾತ್ ಹ್ಯಾಟ್ರಿಕ್ ಸಾಧಿಸುವ ಮೂಲಕ ಮನೋಜ್ಞ ಬೌಲಿಂಗ್ ಮಾಡಿದರು.

ಇದರಿಂದಾಗಿ ಆಸ್ಟ್ರೇಲಿಯಾ ಗೆಲ್ಲುವುದಕ್ಕೆ 413 ರನ್‌ಗಳ ಬೃಹತ್ ಮೊತ್ತ ದಾಖಲಿಸಬೇಕಾಗಿದೆ. ಆಸೀಸ್ ಈಗಾಗಲೇ 3 ವಿಕೆಟ್ ಕಳೆದುಕೊಂಡಿದ್ದು, ಈ ಬೃಹತ್ ಮೊತ್ತ ದಾಖಲಿಸುವುದು ಅಸಾಧ್ಯವೆಂದೇ ಭಾವಿಸಲಾಗಿದೆ. ಇದರಿಂದಾಗಿ ಎರಡನೇ ಟೆಸ್ಟ್ ಕೂಡ ಆಸೀಸ್ ಕೈತಪ್ಪಿಹೋಗುವ ಲಕ್ಷಣಗಳು ಹೆಚ್ಚಾಗಿ ಕಂಡುಬಂದಿದೆ. ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ  237 ರನ್ ಮಾತ್ರ ಗಳಿಸಿ ಆಲೌಟ್‌ ಆಗಿದೆ. ಆಸೀಸ್ ಪರ ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿ ಮಾಡಿ 6 ವಿಕೆಟ್ ಕಬಳಿಸಿದರು.
ಸ್ಕೋರು ವಿವರ
ಶ್ರೀಲಂಕಾ ಮೊದಲ ಇನ್ನಿಂಗ್ಸ್ 281ಕ್ಕೆ ಆಲೌಟ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 106ಕ್ಕೆ 10 ವಿಕೆಟ್
ಶ್ರೀಲಂಕಾ ಎರಡನೇ ಇನ್ನಿಂಗ್ಸ್ 237ಕ್ಕೆ ಆಲೌಟ್
ಬ್ಯಾಟಿಂಗ್ ವಿವರ
ಕುಸಾಲ್ ಪೆರೀರಾ 35, ಮ್ಯಾಥೀವ್ಸ್ 47, ದಿಲ್ರುವಾನ್ ಪೆರೀರಾ 64
5-1 (ಕೌಶಲ್ ಸಿಲ್ವಾ, 1.6), 9-2 (ದಿಮುತ್ ಕರುನಾರತ್ನೆ, 2.2), 31-3 (ಕುಸಾಲ್ ಮೆಂಡಿಸ್, 6.1), 79-4 (ಕುಸಾಲ್ ಪೆರೆರಾ, 15.3), 98-5 (ದಿನೇಶ್ ಚಾಂಡಿಮಾಲ್, 23.2), 121-6 (ಆ್ಯಂಜೆಲೊ ಮ್ಯಾಥ್ಯೂಸ್, 31.4), 172-7 (ಧನಂಜಯ ಡಿ ಸಿಲ್ವ, 39.6), 233-8 (ರಂಗನ ಹೆರಾತ್, 58.6), 237-9 (ದಿಲ್ರುವಾನ್ ಪೆರೆರಾ, 59.2), 237-10 (ವಿಶ್ವ ಫರ್ನಾಂಡೊ, 59.3)
 ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 25ಕ್ಕೆ 3 ವಿಕೆಟ್
ರಂಗನಾ ಹೆರಾತ್ 1 ವಿಕೆಟ್, ಪೆರೇರಾ 2 ವಿಕೆಟ್ 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ