ವಿಶ್ವಕಪ್ ಸೆಮಿಫೈನಲ್: ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 150

ಗುರುವಾರ, 26 ಮಾರ್ಚ್ 2015 (10:48 IST)
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದೆ. ಸ್ಟೀವನ್ ಸ್ಮಿತ್ 77 ರನ್ ಗಳಿಸಿದ್ದರೆ, ಆರಾನ್ ಫಿಂಚ್   54 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.  ನಾಲ್ಕನೇ ಓವರಿನಲ್ಲಿ ಉಮೇಶ್ ಯಾದವ್ ಎಸೆತದಲ್ಲಿ ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಔಟಾಗುವ ಮೂಲಕ ಆಸಿಸ್ ಮೊದಲ ವಿಕೆಟ್ ಪತನಗೊಂಡಿದೆ.

ಯಾದವ್ ಬೌಲಿಂಗ್‌ನಲ್ಲಿ ವಾರ್ನರ್ ಲೆಗ್ ಸೈಡ್‌ನಲ್ಲಿ ಚೆಂಡನ್ನು ಹೊಡೆಯಲು ಹೋದಾಗ ಮಿಡ್ ಆಫ್‌ನಲ್ಲಿ ವಿರಾಟ್ ಕೊಹ್ಲಿಗೆ ಸುಲಭದ ಕ್ಯಾಚಿತ್ತು ಔಟಾದರು. ವಾರ್ನರ್ ಸ್ಕೋರ್ ಕೇವಲ 12 ರನ್‌ಗಳಾಗಿತ್ತು. ಪರ್ತ್‌ನಲ್ಲಿ ಆಫ್ಘಾನಿಸ್ತಾನದ ವಿರುದ್ಧ ವಾರ್ನರ್ ಭರ್ಜರಿ 178 ರನ್ ಸ್ಕೋರ್ ಮಾಡಿದ್ದರು.

ವಿಶ್ವಕಪ್‌ನಲ್ಲಿ ವಾರ್ನರ್ ಸ್ಕೋರ್ ವಿವರ, 22, 34, 178, 9, 21 ಅಜೇಯ, 24 ಮತ್ತು ಈಗ 12 ರನ್‌ಗಳಾಗಿವೆ.  ವಾರ್ನರ್ ಔಟಾದ ಬಳಿಕ ಸ್ಮಿತ್ ಮತ್ತು ಫಿಂಚ್  117 ರನ್ ಜೊತೆಯಾಟದಿಂದ ಆಸ್ಟ್ರೇಲಿಯಾದ ಸ್ಕೋರಿಗೆ ಚೇತರಿಕೆ ನೀಡಿದರು. 

ವೆಬ್ದುನಿಯಾವನ್ನು ಓದಿ