ರಾಂಚಿಯಲ್ಲಿ ಟೀಂ ಇಂಡಿಯಾ ವಿರುದ್ಧ ಗರಿಷ್ಠ ಮೊತ್ತ ದಾಖಲಿಸಿದ ಆಸ್ಟ್ರೇಲಿಯಾ
ಶುಕ್ರವಾರ, 8 ಮಾರ್ಚ್ 2019 (17:45 IST)
ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತವನ್ನೇ ಪೇರಿಸಿದೆ.
ನಿಗದಿತ 50 ಓವರ್ ಗಳಲ್ಲಿ ಆಸೀಸ್ 5 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿದೆ. ಇದು ರಾಂಚಿ ಮೈದಾನದಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ ಶತಕ (104) ಮತ್ತು ನಾಯಕ ಏರಾನ್ ಫಿಂಚ್ ಅರ್ಧಶತಕ (93) ಗಳಿಸಿ ಮೊದಲ ವಿಕೆಟ್ ಗೆ ಬರೋಬ್ಬರಿ 193 ರನ್ ಗಳ ಜತೆಯಾಟವಾಡಿದರು.
ಇದರಿಂದಾಗಿ ಭಾರತೀಯ ಬೌಲರ್ ಗಳು 40 ಓವರ್ ವರೆಗೂ ವಿಕೆಟ್ ಸಿಗದೇ ಬೆವರಿಳಿಸಬೇಕಾಯಿತು. ಆದರೆ ಅಂತಿಮ 10 ಓವರ್ ಗಳಲ್ಲಿ ನಿಯಂತ್ರಿತ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ರನ್ ನಿಯಂತ್ರಿಸಿದರು. ಕುಲದೀಪ್ ಯಾದವ್ 3 ವಿಕೆಟ್ ಕಬಳಿಸಿದರೆ, ಶಮಿಗೆ 1 ವಿಕೆಟ್ ಸಿಕ್ಕಿತು. ಉಳಿದೊಂದು ವಿಕೆಟ್ ಧೋನಿ-ರವೀಂದ್ರ ಜಡೇಜಾ ಅವರ ಅದ್ಭುತ ಕಾಂಬಿನೇಷನ್ ನಿಂದಾಗಿ ರನೌಟ್ ರೂಪದಲ್ಲಿ ಸಿಕ್ಕಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ