ಆಸ್ಟ್ರೇಲಿಯಾಕ್ಕೆ ಬೇಕಿತ್ತಾ ವಿರಾಟ್ ಕೊಹ್ಲಿಯನ್ನು ಕೆಣಕುವ ಕೆಲಸ?!

ಸೋಮವಾರ, 20 ಮಾರ್ಚ್ 2017 (08:24 IST)
ರಾಂಚಿ: ತೃತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಭುಜದ ಗಾಯವನ್ನು ಅಣಕ ಮಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರು ಯಾಕಾದರೂ ಹೀಗೆ ಮಾಡಿದೆವೋ ಎಂದು ತಲೆ ಚಚ್ಚುವಂತಾಗಿದೆ.

 

ಕೊಹ್ಲಿ ಭುಜ ಹಿಡಿದುಕೊಂಡು ಮೈದಾನದಿಂದ ಹೊರಗೆ ಹೋಗಿದ್ದನ್ನು ನಂತರ ಅವರು ಬ್ಯಾಟಿಂಗ್ ಗೆ ಬಂದಾಗ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್ ವೆಲ್ ಅಣಕ ಮಾಡಿದ್ದರು. ಇದನ್ನು ಕೊಹ್ಲಿ ಸರಿಯಾಗಿಯೇ ತಿರುಗಿಸಿ ಕೊಟ್ಟಿದ್ದಾರೆ.

 
ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ಡೇವಿಡ್ ವಾರ್ನರ್ ಔಟಾದಾಗ ಮತ್ತೆ ಭುಜದ ಹಿಡಿದುಕೊಂಡು ನೋವಾದವರಂತೆ ನಾಟಕ ಮಾಡಿದ ಕೊಹ್ಲಿ, ಆಸ್ಟ್ರೇಲಿಯನ್ನರಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

 
ಈ ನಡುವೆ ಕೊಹ್ಲಿ ಗಾಯವನ್ನು ಅಣಕ ಮಾಡಿದ ಆಸ್ಟ್ರೇಲಿಯನ್ನರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ ತಲೆಗೆ ಏಟು ಬಿದ್ದು ಮೃತರಾದ ಆಸೀಸ್  ಕ್ರಿಕೆಟಿಗ ಫಿಲಿಪ್ ಹ್ಯೂಸ್ ರನ್ನು ಉಲ್ಲೇಖಿಸಿದ್ದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟ್ ವಿವಿಎಸ್ ಲಕ್ಷ್ಮಣ್ ಮೇಲೆ ಆಸೀಸ್ ಮಾಧ್ಯಮಗಳು ಮುಗಿಬಿದ್ದಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ