ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅವಮಾನ ಮಾಡಿದ ಆಸ್ಟ್ರೇಲಿಯನ್ ಪತ್ರಿಕೆ

ಮಂಗಳವಾರ, 4 ಡಿಸೆಂಬರ್ 2018 (09:23 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರನ್ನು ಅಲ್ಲಿನ ಮಾಧ್ಯಮವೊಂದು ಅವಮಾನ ಮಾಡುವ ರೀತಿಯಲ್ಲಿ ಬಣ್ಣಿಸಿದ್ದು, ಇದರ ವಿರುದ್ಧ ತನ್ನ ದೇಶದವರಿಂದಲೇ ಟೀಕೆಗೊಳಗಾಗಿದೆ.


ಟೀಂ ಇಂಡಿಯಾ ಆಸ್ಟ್ರೇಲಿಯಾದ ಕೆಲವೊಂದು ಪಿಚ್ ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇಲ್ಲಿನ ವೇಗ ಮತ್ತು ಬೌನ್ಸಿ ಪಿಚ್ ನ ಬಗ್ಗೆ ಟೀಂ ಇಂಡಿಯಾಗೆ ಭಯ. ಇದಕ್ಕಾಗಿಯೇ ಕುಂಟು ನೆಪ ಹೇಳಿ ಕೆಲವೊಂದು ಮೈದಾನದ ಪಿಚ್ ಬಗ್ಗೆ ಆಕ್ಷೇಪವೆತ್ತಿದೆ. ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಅಂಜುಬುರುಕರು ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಮಾಡಿದೆ.

ಆದರೆ ಈ ವರದಿ ಬಗ್ಗೆ ಭಾರತೀಯರಿಗಿಂತ ಮೊದಲೇ ಆಸ್ಟ್ರೇಲಿಯಾದಲ್ಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಟ್ವಿಟರ್ ನಲ್ಲಿ ಈ ಬಗ್ಗೆ ತಮ್ಮದೇ ದೇಶದ ಮಾಧ‍್ಯಮದ ಬಗ್ಗೆ ಹರಿಹಾಯ್ದಿರುವ ಆಸ್ಟ್ರೇಲಿಯನ್ನರು, ಭಾರತೀಯ ಬ್ಯಾಟ್ಸ್ ಮನ್ ಗಳು ಆಸ್ಟ್ರೇಲಿಯಾದಲ್ಲಿ ಮಾಡಿರುವ ಸಾಧನೆಗಳ ಅಂಕಿ ಅಂಶವನ್ನೇ ನೀಡಿದ್ದಲ್ಲದೆ, ಈ ರೀತಿ ನಮ್ಮ ದೇಶಕ್ಕೆ ಪ್ರವಾಸ ಬಂದ ತಂಡವನ್ನು ಬಾಲಿಶವಾಗಿ ಹೀಗೆಳೆಯುವ ಕೆಲಸವನ್ನು ಯಾವಾಗ ಆಸ್ಟ್ರೇಲಿಯನ್ ಮಾಧ್ಯಮಗಳು ನಿಲ್ಲಿಸುತ್ತವೆ ಎಂದು ಜರೆದಿದ್ದಾರೆ. ಇಂತಹ ವರದಿಗಳಿಂದ ಆಸ್ಟ್ರೇಲಿಯಾ ದೇಶ ಮತ್ತು ಜನರ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂದು ಅಲ್ಲಿನವರೇ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ