ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ದಿವ್ಯಾಂಶಿ ತಾಯಿಯಿಂದ ಗಂಭೀರ ಆರೋಪ

Krishnaveni K

ಗುರುವಾರ, 24 ಜುಲೈ 2025 (16:11 IST)
ಬೆಂಗಳೂರು: ಆರ್ ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಮೈದಾನದ ಬಳಿ ಉಂಟಾದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ ದಿವ್ಯಾಂಶಿ ತಾಯಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಆರ್ ಸಿಬಿ ಐಪಿಎಲ್ 2025 ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಚಿನ್ನಸ್ವಾಮಿ ಮೈದಾನದ ಬಳಿ ಹೋಗಿದ್ದ ದಿವ್ಯಾಂಶಿ 18 ವರ್ಷದ ಯುವತಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಳು. ಒಟ್ಟು 11 ಮಂದಿ ಸಾವನ್ನಪ್ಪಿದವರ ಪೈಕಿ ಈಕೆಯೂ ಒಬ್ಬಳಾಗಿದ್ದಳು.

ಆದರೆ ಪೋಸ್ಟ್ ಮಾರ್ಟಮ್ ಮಾಡಿ ಮೃತದೇಹ ಹಸ್ತಾಂತರಿಸಿದಾಗ ಆಕೆಯ ಕಿವಿಯಲ್ಲಿದ್ದ ಚಿನ್ನದ ಕಿವಿಯೋಲೆ ನಾಪತ್ತೆಯಾಗಿದೆ ಎಂದು ತಾಯಿ ಅಶ್ವಿನಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕಿವಿಯೋಲೆ ಆಕೆಗೆ ಒಂದು ವರ್ಷದ ಹಿಂದೆ ಮಾವ ಉಡುಗೊರೆ ನೀಡಿದ್ದಾಗಿತ್ತು. ಇದರ ಮೇಲೆ ಆಕೆಗೆ ಭಾವನಾತ್ಮಕ ಕನೆಕ್ಷನ್ ಇತ್ತು. ಈ ಕಾರಣಕ್ಕೆ ಇದನ್ನು ಯಾವಾಗಲೂ ಧರಿಸುತ್ತಿದ್ದಳು.

ಆದರೆ ಪೋಸ್ಟ್ ಮಾರ್ಟಮ್ ಮಾಡಿ ದೇಹ ಹಸ್ತಾಂತರಿಸುವಾಗ ಕಿವಿಯೋಲೆ ನಾಪತ್ತೆಯಾಗಿದೆ ಎಂದು ದಿವ್ಯಾಂಶಿ ತಾಯಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ