ಎಂ.ಎಸ್.ಧೋನಿಗೆ 20 ಕೋಟಿ ರೂ. ವಂಚಿಸಿದ ಸ್ಪಾರ್ಟಾನ್

ಶುಕ್ರವಾರ, 15 ಜುಲೈ 2016 (16:39 IST)
ಭಾರತದ ಸೀಮಿತ ಓವರುಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್‌ಗಳಿಂದ ನಿವೃತ್ತಿಯಾಗಿದ್ದರೂ ಜಾಹೀರಾತು ಜಗತ್ತಿನಲ್ಲಿ ಇನ್ನೂ ಬೇಡಿಕೆ ಹೊಂದಿರುವ ಆಟಗಾರರಾಗಿದ್ದಾರೆ. ಆದರೆ ಅವರು ಜಾಹೀರಾತು ನೀಡುವ ಸ್ಪಾರ್ಟಾನ್ ಸ್ಫೋರ್ಟ್ಸ್‌ ಬ್ರಾಂಡ್ ಅವರಿಗೆ 20 ಕೋಟಿ ರೂ. ವಂಚಿಸಿದೆ.

ಮೂರು ವರ್ಷಗಳ ಬ್ಯಾಟ್ ಮತ್ತು ಪ್ರಾಯೋಜಕತ್ವದ ಒಪ್ಪಂದವು 13 ಕೋಟಿ ರೂ.ಗಳಾಗಿದ್ದು, ಆಸ್ಟ್ರೇಲಿಯಾ ಮೂಲದ ಸ್ಪೋರ್ಟಿಂಗ್ ಗೇರ್ ಮತ್ತು ಉಪಕರಣ ಕಂಪನಿ ಸ್ಪಾರ್ಟಾನ್ ಸ್ಫೋರ್ಟ್ಸ್ ಧೋನಿ ಪೇಮೆಂಟ್ ಬಾಕಿವುಳಿಸಿಕೊಂಡಿದೆ. ಧೋನಿಯ ಬ್ಯಾಟ್ ಒಪ್ಪಂದದ ರಾಯಲ್ಟಿ ನಿಯಮ ಕೂಡ ಸೇರಿದ್ದರಿಂದ ಧೋನಿಗೆ ಕೊಡಬೇಕಾದ ಹಣ 20 ಕೋಟಿ ರೂ.ಗಳಿಗೆ ಮುಟ್ಟಿದೆ.
 
ಧೋನಿ ಮ್ಯಾನೇಜ್‌ಮೆಂಟ್ ಕಂಪನಿ ರಿತಿ ಸ್ಫೋರ್ಟ್ಸ್‌ಗೆ ಸಲಹೆ ನೀಡುವ ಕಾನೂನು ಸಂಸ್ಥೆಯ ಮೂಲಗಳ ಪ್ರಕಾರ, 2013ರಲ್ಲಿ ಜಾಹೀರಾತು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಸ್ಪಾರ್ಟಾನ್ ನಾಲ್ಕು ಕಂತುಗಳನ್ನು ಮಾತ್ರ ಪಾವತಿ ಮಾಡಿದೆ ಎಂದು ಕಾನೂನು ಸಂಸ್ಥೆಯ ಮೂಲಗಳು ಹೇಳಿವೆ. 
 
 ಸ್ಪಾರ್ಟಾನ್ ಬಾಸ್ ಶರ್ಮಾ ಅವರು ಪುನರಾವರ್ತಿತ ಪ್ರಯತ್ನಗಳ ನಡುವೆಯೂ ಕರೆಗಳಿಗೆ ಮತ್ತು ಸಂದೇಶಗಳಿಗೆ ಸ್ಪಂದಿಸುತ್ತಿಲ್ಲ. ಆಸ್ಟ್ರೇಲಿಯಾದ ಕಂಪನಿ ಧೋನಿ ಅವರಲ್ಲದೇ ಕ್ರಿಕೆಟ್ ಜಗತ್ತಿನ ದೊಡ್ಡ ಹೆಸರುಗಳಾದ ಮೈಕೇಲ್ ಕ್ಲಾರ್ಕ್, ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಮಾರ್ಗನ್, ಮಿಚೆಲ್ ಜಾನ್ಸನ್ ಮತ್ತು ವಿವಿಯನ್ ರಿಚರ್ಡ್ಸ್ ಮುಂತಾದವರು  ಅದರ ರಾಯಭಾರಿಗಳಾಗಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ