ಕ್ಯಾಚ್ ಕೈ ಬಿಟ್ಟ ತಪ್ಪಿಗೆ ರೋಹಿತ್ ಶರ್ಮಾ ಪ್ರಾಯಶ್ಚಿತ್ತ ಮಾಡಿಕೊಂಡರಾ: ಅಕ್ಸರ್ ಪಟೇಲ್ ಹೇಳಿದ್ದೇನು

Krishnaveni K

ಮಂಗಳವಾರ, 25 ಫೆಬ್ರವರಿ 2025 (16:40 IST)
ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಕ್ಸರ್ ಪಟೇಲ್ ಗೆ ಹ್ಯಾಟ್ರಿಕ್ ಅವಕಾಶ ಕೈತಪ್ಪಿಸಿದ್ದಕ್ಕೆ ರೋಹಿತ್ ಶರ್ಮಾ ಪ್ರಾಯಶ್ಚಿತ್ತವಾಗಿ ಅವರನ್ನು ಡಿನ್ನರ್ ಗೆ ಕರೆದುಕೊಂಡು ಹೋಗಿದ್ದಾರಾ? ಸ್ವತಃ ಅಕ್ಸರ್ ಪಟೇಲ್ ರಿವೀಲ್ ಮಾಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಕ್ಸರ್ ಪಟೇಲ್ ಗೆ ಹ್ಯಾಟ್ರಿಕ್ ಅವಕಾಶವಿತ್ತು. ಆದರೆ ಮೂರನೇ ಎಸೆತದಲ್ಲಿ ರೋಹಿತ್ ಶರ್ಮಾ ಕೈಗೆ ಸುಲಭವಾಗಿ ಬಂದ ಕ್ಯಾಚ್ ಕೈ ಚೆಲ್ಲಿದ್ದರಿಂದ ಅಕ್ಸರ್ ಗೆ ಐತಿಹಾಸಿಕ ದಾಖಲೆ ಮಾಡುವ ಅವಕಾಶ ಮಿಸ್ ಆಯ್ತು.

ಇದಕ್ಕೆ ಅವರು ಮೈದಾನದಲ್ಲೇ ಕೈ ಮುಗಿದು ಅಕ್ಸರ್ ಕ್ಷಮೆ ಯಾಚಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ರೋಹಿತ್, ನಾನು ತಪ್ಪು ಮಾಡಿಬಿಟ್ಟೆ. ಇದರ ಪ್ರಾಯಶ್ಚಿತ್ತವಾಗಿ ಅವರನ್ನು ಡಿನ್ನರ್ ಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದರು.

ನಿಜವಾಗಿ ರೋಹಿತ್ ಡಿನ್ನರ್ ಗೆ ಕರೆದುಕೊಂಡು ಹೋದರೇ? ಈ ಪ್ರಶ್ನೆಗೆ ಉತ್ತರಿಸಿರುವ ಅಕ್ಸರ್ ಪಟೇಲ್, ಇದುವರೆಗೆ ಕರೆದುಕೊಂಡು ಹೋಗಿಲ್ಲ. ಆದರೆ ನಮಗೆ ಒಂದು ವಾರದ ಬ್ರೇಕ್ ಇದೆ. ಈ ಸಮಯದಲ್ಲಿ ಒಂದು ದಿನವಾದರೂ ನಾನು ಡಿನ್ನರ್ ಗೆ ಕರೆದುಕೊಂಡು ಹೋಗಲು ಕೇಳುತ್ತೇನೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ