IND vs PAK: ಸೋತ್ರೂ ಸರಿ, ವಿರಾಟ್ ಕೊಹ್ಲಿ ಶತಕ ತಪ್ಪಿಸಲು ಪಾಕಿಸ್ತಾನ ಏನೆಲ್ಲಾ ಕುತಂತ್ರ ಮಾಡಿತ್ತು
ತಾವು ಸೋತರೂ ಸರಿ ಕೊಹ್ಲಿ ಶತಕ ಗಳಿಸಬಾರದು ಎಂದು ಪಾಕಿಸ್ತಾನ ಆಟಗಾರರು ಸಾಕಷ್ಟು ಹೆಣಗಾಡಿದ್ದರು. ಆದರೆ ಕೊಹ್ಲಿ ಜಾಣತನದಿಂದ ಬೌಂಡರಿ ಗಳಿಸಿ ಶತಕ ಗಳಿಸಿಯೇ ಬಿಟ್ಟರು. ಆದರೆ ಇದನ್ನು ತಪ್ಪಿಸಲು ಪಾಕ್ ಇನ್ನಿಲ್ಲದ ಶ್ರಮ ವಹಿಸಿತ್ತು.
ವಿರಾಟ್ ಕೊಹ್ಲಿ-ಶ್ರೇಯಸ್ ಅಯ್ಯರ್ ಜೊತೆಯಾಟದಿಂದ ಪಾಕ್ ಗೆ ಸೋಲಿನ ಅರಿವಾಗಿತ್ತು. ಆದರೆ ಕೊಹ್ಲಿ ಶತಕ ತಪ್ಪಿಸಲು ಫೀಲ್ಡರ್ ಗಳು ಮತ್ತು ಬೌಲರ್ ಗಳು ಶ್ರಮವಹಿಸಿದ್ದರು. ಶಾಹಿನ್ ಅಫ್ರಿದಿ ಬೇಕೆಂದೇ ವೈಡ್ ಎಸೆದು ಕೊಹ್ಲಿ ಶತಕ ಗಳಿಸದಂತೆ ಪ್ರಯತ್ನಿಸಿದರು.
ಇನ್ನು, ಪಾಕಿಸ್ತಾನ ಕೀಪರ್, ನಾಯಕ ಮೊಹಮ್ಮದ್ ರಿಜ್ವಾನ್ ಸುಲಭವಾಗಿ ತಡೆಯಬಹುದಾಗಿದ್ದ ಬಾಲ್ ನ್ನು ತಡೆಯದೇ ಬೌಂಡರಿಯಾಗುವಂತೆ ಮಾಡಿದರು. ಇನ್ನೊಂದು ಎಸೆತವನ್ನು ಓವರ್ ಥ್ರೋ ಮಾಡಿದರು. ಅದೇನೇ ಮಾಡಿದರೂ ಕೊಹ್ಲಿ ಕೊನೆಯ ಎಸೆತವನ್ನು ಬೌಂಡರಿಗಟ್ಟಿ ಶತಕ ಪೂರೈಸದಂತೆ ಮಾಡಲು ಪಾಕ್ ಗೆ ಸಾಧ್ಯವಾಗಲಿಲ್ಲ.