ಶ್ರೀಶಾಂತ್, ಚಹ್ವಾಣ್ ಮತ್ತು ಚಾಂಡಿಲಾ ವಿರುದ್ಧ ನಿಷೇಧ ತೆರವಿಲ್ಲ : ಠಾಕುರ್

ಬುಧವಾರ, 29 ಜುಲೈ 2015 (13:34 IST)
ಶ್ರೀಶಾಂತ್, ಅಂಕಿತ್ ಚವ್ಹಾಣ್ ಮತ್ತು ಅಜಿತ್ ಚಾಂಡಿಲಾ ಅವರಿಗೆ ಬಿಸಿಸಿಐ ವಿಧಿಸಿರುವ ನಿಷೇಧವನ್ನು ತೆರವು ಮಾಡುವುದಿಲ್ಲ. ಮೂವರು ರಾಜಸ್ಥಾನ ಆಟಗಾರರು ಬೇಕಿದ್ದರೆ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಹೇಳಿದ್ದಾರೆ. ದೆಹಲಿ ಕೋರ್ಟ್ ಕೆಳ ಕೋರ್ಟ್ ತೀರ್ಪನ್ನು ಪ್ರಶ್ನಿಸಲು ಮೇಲಿನ ಕೋರ್ಟ್‌ಗೆ ಹೋಗುತ್ತಿದೆ ಎಂದು ಠಾಕುರ್ ಹೇಳಿದರು. 
 
ಶ್ರೀಶಾಂತ್ ವಿರುದ್ಧದ ನಿಷೇಧ ತೆರವು ಮಾಡುವಂತೆ ಕೆಸಿಎ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಠಾಕುರ್ ಕಾಮೆಂಟ್ ಹೊರಬಿದ್ದಿದೆ. ದೆಹಲಿ ವಿಚಾರಣೆ ಕೋರ್ಟ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಎಲ್ಲಾ ಆರೋಪಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ರದ್ದುಮಾಡಿರುವುದರಿಂದ ಕ್ರಿಮಿನಲ್ ಕ್ರಮವು ಶಿಸ್ತುಕ್ರಮಕ್ಕಿಂತ ಸಂಪೂರ್ಣ ಭಿನ್ನವಾಗಿದೆ.

ಈ ನಿರ್ಧಾರವನ್ನು ಬಿಸಿಸಿಐ ಶಿಸ್ತು ಸಮಿತಿ ಕೈಗೊಂಡಿದ್ದು, ಕೋರ್ಟ್ ಕೈಗೊಂಡಿಲ್ಲ. ಭಯೋತ್ಪಾದನೆ ವಿರೋಧಿ ಘಟಕದ ವರದಿ ಅನ್ವಯ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬಿಸಿಸಿಐ ನಿಯಮಾವಳಿಯಲ್ಲಿ ಈ ಆಟಗಾರರ ವಿರುದ್ಧ ನಿಷೇಧ ಮುಂದುವರಿಯುತ್ತದೆ ಎಂದು ಠಾಕುರ್ ಹೇಳಿದರು. 
 

ವೆಬ್ದುನಿಯಾವನ್ನು ಓದಿ