ಟೀಂ ಇಂಡಿಯಾ ಸೋಲಿಸುವುದು ಎಲ್ಲರಿಗೂ ಗೊತ್ತು: ಕೊಚ್ಚಿಕೊಂಡ ಬಾಂಗ್ಲಾದೇಶ ಕೋಚ್
ಟೀಂ ಇಂಡಿಯಾವೇನೂ ಸೋಲಿಸಲೇ ಆಗದ ಎದುರಾಳಿಯೇನೂ ಅಲ್ಲ. ಅವರನ್ನು ಸೋಲಿಸುವುದು ಹೇಗೆಂದು ಎಲ್ಲರಿಗೂ ಗೊತ್ತಿದೆ. ಟೀಂ ಇಂಡಿಯಾ ಏಷ್ಯಾ ಕಪ್ ನಲ್ಲಿ ಇದುವರೆಗೆ ಮಾಡಿದ ಸಾಧನೆಗಳೇನೂ ನಮಗೆ ಲೆಕ್ಕಕ್ಕೆ ಬರಲ್ಲ ಎಂದಿದ್ದಾರೆ.
ಏಷ್ಯಾ ಕಪ್ ನಲ್ಲಿ ಅತೀ ಹೆಚ್ಚು ಬಾರಿ ಟೈಟಲ್ ಗೆದ್ದ ದಾಖಲೆ ಹೊಂದಿರುವ ಟೀಂ ಇಂಡಿಯಾ ಈ ಬಾರಿಯೂ ಇದುವರೆಗೆ ಯಾವುದೇ ಪಂದ್ಯವನ್ನೂ ಸೋಲದೇ ಸೂಪರ್ ಫೋರ್ ಹಂತದಲ್ಲಿದೆ. ಮೊದಲ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿರುವ ಟೀಂ ಇಂಡಿಯಾ ಈಗ ಎರಡನೇ ಪಂದ್ಯದಲ್ಲಿ ಬಾಂಗ್ಲಾವನ್ನು ಎದುರಿಸಲಿದೆ.
ಹೀಗಾಗಿ ಟೀಂ ಇಂಡಿಯಾವನ್ನು ಎದುರಿಸುವುದು ಕಷ್ಟವಾಗಲಿದೆಯೇ ಎಂದು ಸುದ್ದಿಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದ್ದಾರೆ. ಭಾರತದ ಹಿಂದಿನ ಸಾಧನೆಗಳು ಲೆಕ್ಕಕ್ಕೆ ಬರಲ್ಲ. ಈವತ್ತು ಹೇಗೆ ಆಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ನಾವು ಗೆಲುವಿಗಾಗಿ ಎಲ್ಲಾ ಪ್ರಯತ್ನ ಮಾಡಲಿದ್ದೇವೆ. ಆ ಮೂಲಕವೇ ಭಾರತವನ್ನು ಸೋಲಿಸಲಿದ್ದೇವೆ ಎಂದಿದ್ದಾರೆ.