IND vs PAK: ಭಾರತದ ಗೆಲುವಿಗೆ 128 ರನ್ ಗಳ ಗುರಿ ನೀಡಿದ ಪಾಕಿಸ್ತಾನ

Krishnaveni K

ಭಾನುವಾರ, 14 ಸೆಪ್ಟಂಬರ್ 2025 (21:47 IST)
Photo Credit: BCCI
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಗೆಲುವಿಗೆ ಪಾಕಿಸ್ತಾನ 128 ರನ್ ಗಳ ಗುರಿ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು.
 

ಇಂದು ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ 1 ರನ್ ಗೇ ಹಾರ್ದಿಕ್ ಪಾಂಡ್ಯ ಮೊದಲ ವಿಕೆಟ್ ಉಡಾಯಿಸಿದರು. ಬಳಿಕ ಮೊಹಮ್ಮದ್ ಹ್ಯಾರಿಸ್, ನಾಯಕ ಸಲ್ಮಾನ್, ಹಸನ್ ನವಾಜ್, ಮೊಹಮ್ಮದ್ ನವಾಜ್ ಏಕಂಕಿಗೆ ವಿಕೆಟ್ ಒಪ್ಪಿಸಿದರು.

ಫಖರ್ ಜಮಾನ್ 17 ರನ್ ಮತ್ತು ಫರ್ಹಾನ್ 40 ರನ್ ಗಳಿಸಿ ಗೌರವಯುತ ಮೊತ್ತ ಗಳಿಸಲು ನೆರವಾದರು. ಕೊನೆಯಲ್ಲಿ ಶಾಹಿನ್ ಅಫ್ರಿದಿ ಸ್ಪೋಟಕ 33 ರನ್ ಗಳಿಸಿದ್ದರಿಂದ ತಂಡದ ಮೊತ್ತ 100 ರ ಗಡಿ ದಾಟಿತು.

ಭಾರತದ ಪರ ಬೌಲರ್ ಗಳು ಸಂಘಟಿತ ಹೋರಾಟ ನಡೆಸಿದರು. ಆರಂಭಿಕ ಎರಡು  ವಿಕೆಟ್ ವೇಗಿಗಳಾದ ಪಾಂಡ್ಯ, ಬುಮ್ರಾ ಪಾಲಾದರೆ ಮಧ್ಯಮ ಕ್ರಮಾಂಕದ ಬ್ಯಾಟಿಗರನ್ನು ಕುಲದೀಪ್ ಯಾದವ್, ಅಕ್ಸರ್ ಪಟೇಲ್ ಪೆವಿಲಿಯನ್ ಗಟ್ಟಿದರು. ಕುಲದೀಪ್ 3, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ ತಲಾ 2, ವರುಣ್ ಚಕ್ರವರ್ತಿ 1 ವಿಕೆಟ್ ತಮ್ಮದಾಗಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ