ಬಾಂಗ್ಲಾ ಕ್ರಿಕೆಟರ್ ಶಹಾದತ್ ಹುಸೇನ್ ನಾಪತ್ತೆ, ಪತ್ನಿ ಬಂಧನ

ಸೋಮವಾರ, 5 ಅಕ್ಟೋಬರ್ 2015 (13:51 IST)
ಬಾಂಗ್ಲಾದೇಶ ಪೊಲೀಸರು11 ವರ್ಷದ ಮನೆಸೇವಕಿಯನ್ನು ಥಳಿಸಿ, ಚಿತ್ರಹಿಂಸೆ ನೀಡಿದ ಆರೋಪಗಳಿಗೆ ಸಂಬಂಧಿಸಿದಂತೆ  ಅಂತಾರಾಷ್ಟ್ರೀಯ ಕ್ರಿಕೆಟರ್ ಶಹಾದತ್ ಹುಸೇನ್ ಪತ್ನಿಯನ್ನು  ಬಂಧಿಸಿದ್ದಾರೆ.  ಢಾಕಾ ರಾಜಧಾನಿಯ ಬೀದಿಯಲ್ಲಿ ಗಾಯಗೊಂಡಿದ್ದ ಮನೆಕೆಲಸದ ಬಾಲಕಿ ಅಳುತ್ತಿದ್ದ ದೃಶ್ಯವನ್ನು ಕಂಡ ಬಳಿಕ ಪೊಲೀಸರು ಹುಸೇನ್ ಮನೆ ಮೇಲೆ ದಾಳಿ ಮಾಡಿದ್ದರಿಂದ  ಬಾಂಗ್ಲಾ ಕ್ರಿಕೆಟ್ ಮಂಡಳಿ ಅವರನ್ನು ಅಮಾನತುಗೊಳಿಸಿತ್ತು.

ಆಗಿನಿಂದ ಅವರು ಮತ್ತು ಪತ್ನಿ ನೃತ್ತೊ ಶಹಾದತ್ ತಲೆತಪ್ಪಿಸಿಕೊಂಡು ತಿರುಗುತ್ತಿದ್ದರು. ನೃತ್ತೊ ಶಹಾದತ್ ಅವರನ್ನು ಅವರ ತಂದೆ, ತಾಯಿಗಳ ಮನೆಯಿಂದ ಬಂಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಶಫೀಕರ್ ರೆಹ್ಮಾನ್ ತಿಳಿಸಿದರು.
 
ದಂಪತಿ ಅಲ್ಲಿ ಅಡಗಿದ್ದಾರೆಂದು ಮಾಹಿತಿ ಮೇಲೆ ನಾವು ಮನೆಯ ಮೇಲೆ ದಾಳಿ ಮಾಡಿದಾಗ ಹುಸೇನ್ ಪತ್ನಿ ಮಾತ್ರ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದ್ದು, ಹುಸೇನ್‌ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
 
ಮನೆಕೆಲಸದ ಬಾಲಕಿ ಮಹಫುಜಾ ಅಕ್ತರ್ ಪೊಲೀಸರಿಗೆ ದೂರು ನೀಡುತ್ತಾ, ದಂಪತಿ ತನ್ನನ್ನು ಥಳಿಸಿದರೆಂದು ತಿಳಿಸಿದ್ದಾಳೆ. ಟೆಲಿವಿಷನ್ ಫೂಟೇಜ್‌ನಲ್ಲಿ ಅವಳು ತೀರಾ ನಿಶ್ಯಕ್ತಳಾಗಿದ್ದು, ಕಣ್ಣುಗಳು ಊದಿಕೊಂಡು ಕಪ್ಪು ಬಣ್ಣಕ್ಕೆ ತಿರುಗಿತ್ತು.  ಅವರ ಕೈಗಳ ಮೇಲೆ ಅಡುಗೆಯ ಸೌಟಿನಿಂದ ಬರೆ ಇಟ್ಟಿದ್ದು ದೇಹದ ತುಂಬಾ ಗಾಯದ ಗುರುತುಗಳಿದ್ದವು. 
 

ವೆಬ್ದುನಿಯಾವನ್ನು ಓದಿ